ಪ್ರಮುಖ ಸುದ್ದಿ

ಕೊನೆಗಾಲದಲ್ಲಿ ದೇವೇಗೌಡರು ಗೆಲ್ಲಬೇಕಿತ್ತು : ಪರಾಜಿತ ಬಿಜೆಪಿ ಅಭ್ಯರ್ಥಿ ಎ ಮಂಜು

ರಾಜ್ಯ(ಹಾಸನ)ಮೇ.23:-  ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ. ಸೋಲಿನಿಂದ ಧೃತಿಗೆಟ್ಟಿಲ್ಲ. ನಾನು ಚುನಾವಣೆಯಲ್ಲಿ ಸೋತಿದ್ದಕ್ಕೆ ಬೇಸರವಿಲ್ಲ ಎಂದು ಮಾಜಿ ಸಚಿವ ಎ ಮಂಜು ಹೇಳಿದ್ದಾರೆ.

ನಾನು ಇನ್ನೂ ಮೂರು ತಿಂಗಳು ಕಾದು ನೋಡಿ ನಾನೇ ಸಂಸತ್ಗೆ ಹೋಗುತ್ತೇನೆ. ಕಾನೂನು ಹೋರಾಟ ಮುಂದುವರಿಯುತ್ತದೆ. ದೇವೇಗೌಡರು ಕೊನೆಗಾಲದಲ್ಲಿ ಗೆಲ್ಲಬೇಕಿತ್ತು. ನನಗೆ ಹಾಸನದವನಾಗಿ ಬೇಸರ ಇದೆ ಎಂದು ದೇವೇಗೌಡರ ಸೋಲಿಗೆ ಬೇಸರ ವ್ಯಕ್ತಪಡಿಸಿದರು.

ಮೈತ್ರಿ ಲಾಭವಾಗಿದ್ದು ಕುಟುಂಬಕ್ಕೆ ಮಾತ್ರ. ಈಗಲಾದರು ನಮ್ಮ ನಾಯಕ ಸಿದ್ದರಾಮಯ್ಯ ಎಚ್ಚೆತ್ತುಕೊಳ್ಳಲಿ. ವಿಶ್ವನಾಥ್ ರಾಜೀನಾಮೆ ಕೊಟ್ಟು ಒಳ್ಳೆ ಕೆಲಸ ಮಾಡಿದ್ದಾರೆ. ಸರ್ಕಾರ ಏನಾಗುತ್ತದೆ ಎಂದು ಕಾದುನೋಡಬೇಕು ಎಂದರು.

ಹಾಸನ ಲೋಕಸಭಾ ಚುನಾವಣೆ ಮತ ಎಣಿಕೆ ಮುಕ್ತಾಯವಾಗಿದ್ದು, ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರ ಮೊಮ್ಮಗ ಪ್ರಜ್ವಲ್ 1,42,123 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರಜ್ವಲ್ ರೇವಣ್ಣ 6,75,512 ಮತ ಗಳಿಸಿದ್ದು, ಬಿಜೆಪಿ ಅಭ್ಯರ್ಥಿ ಎ. ಮಂಜು 5,33,389 ಮತ ಗಳಿಸಿದ್ದಾರೆ. ಬಿಎಸ್ಪಿಯ ವಿನೋದ್ ರಾಜ್ 38,682 ಮತಗಳಿಸಿದ್ದಾರೆ. ಒಟ್ಟು 12,74,438 ಮತಗಳು ಚಲಾವಣೆಯಾಗಿದ್ದು, 11,638 ನೋಟಾ ಮತಗಳು ಬಿದ್ದಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: