ಪ್ರಮುಖ ಸುದ್ದಿ

ದೇಶದ ಮತದಾರರು ಪ್ರಬುದ್ಧತೆ ಮೆರೆದಿದ್ದಾರೆ : ಮನುಮುತ್ತಪ್ಪ ಬಣ್ಣನೆ

ರಾಜ್ಯ(ಮಡಿಕೇರಿ) ಮೇ 24 :- ಬಿಜೆಪಿ ಪರವಾಗಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಎ.ಕೆ.ಮನು ಮುತ್ತಪ್ಪ ಅವರು, ಇದೊಂದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನತೆ ನೀಡಿರುವ ತೀರ್ಪು ಐತಿಹಾಸಿಕ. ದೇಶದ ಮತದಾರರು ಪ್ರಬುದ್ಧರು ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ ಎಂದು ಬಣ್ಣಿಸಿದ್ದಾರೆ.
ಪ್ರಧಾನಿ ಮೋದಿ ಅವರು ದೇಶಕ್ಕಾಗಿ ದಕ್ಷ, ಸ್ವಚ್ಛ, ಭ್ರಷ್ಟಾಚಾರ ಮುಕ್ತವಾದ ಆಡಳಿತವನ್ನು ನೀಡಿದ್ದರೂ, ವಿರೋಧ ಪಕ್ಷಗಳು ಅವರ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ನಡೆಸುವುದರೊಂದಿಗೆ ವಾಮ ಮಾರ್ಗದ ಮೂಲಕ ಚುನಾವಣೆ ಗೆಲ್ಲುವ ತಂತ್ರ ರೂಪಿಸಿದ್ದರು. ಆದರೆ ದೇಶದ ಮತದಾರರು ಇದಕ್ಕೆ ತಕ್ಕ ಉತ್ತರ ನೀಡುವ ಮೂಲಕ ತಮಗೆ ಪಕ್ಷಕ್ಕಿಂತ ದೇಶದ ಹಿತ ಮುಖ್ಯ ಎಂಬುದನ್ನು ಸಾರಿ ಹೇಳಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲೂ ಮೈತ್ರಿ ಪಕ್ಷದ ದುರಹಂಕಾರಿಗಳಿಗೆ ಮತದಾರರು ತಕ್ಕ ಪಾಠವನ್ನು ಕಲಿಸಿದ್ದು, ಅಭ್ಯರ್ಥಿಗಳಿಗಿಂತ ದೇಶದ ಹಿತವನ್ನು ಪರಿಗಣಿಸಿ ಮತ ನೀಡಿದ್ದಾರೆ. ದೇಶಕ್ಕೆ ಮೋದಿಯೇ ರಕ್ಷಕ ಎಂಬ ಭಾವನೆ ಇತರ ಪಕ್ಷಗಳವರಲ್ಲೂ ಬಂದಿದೆ ಎಂದು ನುಡಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: