ದೇಶ

ಚಹಾ, ಪಕೋಡಾದೊಂದಿಗೆ ಮೋದಿ ಗೆಲುವನ್ನು ಸಂಭ್ರಮಿಸಿದ ನಟಿ ಕಂಗನಾ ರಾಣಾವತ್

ಮುಂಬೈ,ಮೇ 24-ದೇಶಾದ್ಯಂತ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವುದರಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಇದರಿಂದ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ.

ಮೋದಿ ಅಭಿಮಾನಿ ನಟಿ ಕಂಗನಾ ರಾಣಾವತ್ ಚಹಾ ಹಾಗೂ ಪಕೋಡಾ ಮಾಡಿ ಸಂಭ್ರಮಿಸಿದ್ದಾರೆ. ಕುಟುಂಬದ ಜೊತೆ ಸೆಲಬ್ರೇಟ್ ಮಾಡಿದ್ದಾರೆ.

ಕಂಗಾನಾ ಟೀಂ ಅವರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಮೋದಿ ಜಿಯವರು ಸ್ಟ್ರಾಂಗ್ ಐಡಿಯಾಗಳು, ಮುನ್ನೋಟ, ಜನರ ಆಶೋತ್ತರಗಳನ್ನು ಈಡೇರಿಸಲು ಬದ್ಧರಾಗಿರಲಿ. ನಾವೆಲ್ಲಾ ಮೋದಿಯವರ ಜೊತೆಗಿದ್ದೇವೆ. ನಾನು ಖುಷಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಕಂಗನಾ ತಂಗಿ ರಂಗೋಲಿ ಫೋಟೋ ಶೇರ್ ಮಾಡಿ ಕಂಗನಾ ಅಪರೂಪಕ್ಕೆ ಅಡುಗೆ ಮಾಡುತ್ತಾರೆ. ಅವಳಿಂದು ಮೋದಿ ಜಿ ಗೆಲುವಿನಿಂದ ಖುಷಿಯಾಗಿದ್ದಾಳೆ. ಹಾಗಾಗಿ ಚಾಯ್ ವಿತ್ ಪಕೋಡಾ ಮಾಡಿದ್ದಾಳೆ ಎಂದು ಬರೆದುಕೊಂಡಿದ್ದಾರೆ.  (ಎಂ.ಎನ್)

Leave a Reply

comments

Related Articles

error: