ದೇಶ

ರಕ್ತದಲ್ಲಿನ ವಿಷಕಾರಿ ಅಂಶವೇ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಕಾರಣ : ಲಂಡನ್ ವೈದ್ಯರ ಸ್ಪಷ್ಟನೆ

ರಕ್ತದಲ್ಲಿದ್ದ ಅಧಿಕ ವಿಷಕಾರಿ ಅಂಶವೇ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಸಾವಿಗೆ ಕಾರಣವಾಗಿದೆ ಎಂದು ಅವರ ಶ್ರುಶೂಷೆ ನಡೆಸಿದ ಲಂಡನ್ ವೈದ್ಯ ಡಾ.ರಿಚರ್ಡ್ ಬೀಲೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಜಯಲಲಿತಾ ಸಾವು ಸಂಭವಿಸಿ ಎರಡು ತಿಂಗಳ ನಂತರ ಇದೇ ಮೊದಲಬಾರಿಗೆ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿದ ವೈದ್ಯರು ಜಯಲಲಿತಾ ಅವರ ರಕ್ತದ ಸೋಂಕಿನಿಂದ ರಕ್ತ ಕೆಟ್ಟಿತ್ತು, ಇದರೊಟ್ಟಿಗೆ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹವು ತೀವ್ರವಾಗಿ ಉಲ್ಬಣಗೊಂಡಿದ್ದವು. ಇದು ಹೆಚ್ಚಿನ ಚಿಕಿತ್ಸೆಗೆ ಅಡ್ಡಿಯನ್ನುಂಟು ಮಾಡಿತ್ತು. ಇದರಿಂದಾಗಿ ವಿಷಕಾರಿ ಅಂಶವುಳ್ಳ ರಕ್ತವು ಹೃದಯ ಸೇರಿ ಹೃದಯ ಸ್ತಂಭನ ಉಂಟಾಯಿತು ಎಂದು ಸಾವಿನ ಹಿಂದೆ ಮೂಡಿ ಬಂದಿದ್ದ ವಿವಾದ ಹಾಗೂ ಗೊಂದಲಗಳಿಗೆ  ಬಹಿರಂಗ ಹೇಳಿಕೆ ನೀಡುವ ಮೂಲಕ ತಾತ್ಕಾಲಿಕ ಶಮನ ನೀಡಿದ್ದಾರೆ.

ಜಯಲಲಿತಾ ಆಪ್ತೆ ಶಶಿಕಲಾ ನೂತನ ಮುಖ್ಯಮಂತ್ರಿ ಆಗಿ ಆಯ್ಕೆಯಾದ ಬೆನ್ನಲ್ಲೇ ಲಂಡನ್ ವೈದ್ಯರ ಸುದ್ದಿಗೋಷ್ಠಿ ಹಲವಾರು ಅನುಮಾನಗಳಿಗೆ ಎಡೆ ಮಾಡಿದೆ.

 

 

 

Leave a Reply

comments

Related Articles

error: