ಸುದ್ದಿ ಸಂಕ್ಷಿಪ್ತ

‘ಶಿವಾನುಭವ ದಾಸೋಹ 259’ ನಾಳೆ

ಮೈಸೂರು,ಮೇ.24 : ಜೆಎಸ್ಎಸ್ ಮಹಾವಿದ್ಯಾಪೀಠ, ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ‘ಶಿವಾನುಭವ ದಾಸೋಹ 259’ ಅನ್ನು ಮೇ.25ರ ಸಂಜೆ 6 ಗಂಟೆಗೆ ಜೆಎಸ್ಎಸ್ ಬಡಾವಣೆಯಲ್ಲಿ ಏರ್ಪಡಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ನೀ.ಗಿರಿಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪ ನಿರ್ದೇಶಕ ಮ.ಗು.ಸದಾನಂದಯ್ಯನವರು ‘ಶರಣರ ಸತ್ಯದ ಶೋಧ’ ವಿಷಯವಾಗಿ ಮಾತಾಡುವರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: