ಪ್ರಮುಖ ಸುದ್ದಿ

ದೇಶಕ್ಕೆ ಹಿಂದುಗಳಿಂದ ಅಲ್ಲ, ಹಿಂದುತ್ವವಾದಿಗಳಿಂದ ಅಪಾಯವಿದೆ : ಅಸಾದುದ್ದೀನ್ ಓವೈಸಿ ವಾಗ್ದಾಳಿ

ದೇಶ(ನವದೆಹಲಿ)ಮೇ.24:- ಹಿಂದುತ್ವದ ಕಾರ್ಡ್ ಮೂಲಕ  ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ   ಪ್ರಚಂಡ ಬಹುಮತ ಪಡೆದುಕೊಂಡಿದೆ ಎಂದು ಎಐಎಂಐಎಂ  ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಅಲ್ಲಿನ ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿರುವ ಅವರು ಮೋದಿಯವರ ಪ್ರಚಂಡ ಗೆಲುವಿಗೆ ಕಾರಣ ತಿಳಿಸಿ ಬಿಜೆಪಿ ರಾಷ್ಟ್ರವಾದ ಮತ್ತು ಹಿಂದುತ್ವದ ಕಾರ್ಡ್ ಚಲಾಯಿಸಿ ಗೆಲುವು ಸಾಧಿಸಿದೆ. ಬಿಜೆಪಿ ಇವಿಎಂನಲ್ಲಿ ಅಲ್ಲ, ಹಿಂದುಗಳ ಮೆದುಳಿಗೇ ಕೈ ಹಾಕಿದೆ. ಈ ಚುನಾವಣೆಯಲ್ಲಿ ಜಾತಿ, ಧರ್ಮ ಮುಖ್ಯವಾಗಿರುವುದು ಸಾಬೀತಾಗಿದೆ. ಬಿಜೆಪಿ ಹಿಂದುತ್ವ ಕಾರ್ಡ್ ಚಲಾಯಿಸಿ ಯಶಸ್ವಿಯಾಗಿದೆ. ಇಡೀ ಚುನಾವಣೆಯಲ್ಲಿ ಅಭಿವೃದ್ಧಿಯ ವಿಷಯ ಕಾಣೆಯಾಗಿದೆ. ದೇಶಕ್ಕೆ ಹಿಂದುಗಳಿಂದ ಅಲ್ಲ, ಹಿಂದುತ್ವವಾದಿಗಳಿಂದ ಅಪಾಯವಿದೆ ಎಂದಿದ್ದಾರೆ. (ಎಸ್.ಎಚ್)

 

Leave a Reply

comments

Related Articles

error: