ಮೈಸೂರು

2017ರ ಕೈಗಾರಿಕಾ ಕ್ಯಾಲೆಂಡರ್ ಬಿಡುಗಡೆ

ಮೈಸೂರಿನಲ್ಲಿ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ ಡಿ. ರಂದೀಪ್, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ ಹಾಗೂ ಮೈಸೂರು ಪ್ರಿಂಟರ್ಸ ಕ್ಲಸ್ಟರ್‍ನ ಪ್ರಕಾಶಿಸಿರುವ 2017 ರ ಕೈಗಾರಿಕಾ ಕ್ಯಾಲೆಂಡರ್‍ ಅನ್ನು ಬಿಡುಗಡೆ ಮಾಡಿದರು.

ಸಂಸದ ಧ್ರುವನಾರಾಯಣ ಮಾತನಾಡಿ ಕೈಗಾರಿಕಾ ಕ್ಯಾಲೆಂಡರ್ ಉದ್ಯಮಿದಾರರು ವಿವಿಧ ಇಲಾಖೆಗಳಿಗೆ ಪಾವತಿಸಬೇಕಾದ ತೆರಿಗೆಗಳು ಹಾಗೂ ವರದಿಗಳ ವಿವರಗಳ ಜೊತೆಗೆ ಕೈಗಾರಿಕೆಗೆ ಪೂರಕವಾದ ಎಲ್ಲಾ ಇಲಾಖೆಗಳ ಮಾಹಿತಿ ಒಳಗೊಂಡಿದ್ದು ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ಕ್ಷೇತ್ರದ ಶಾಸಕ ಹಾಗೂ ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸು ಮಾತನಾಡಿ  ಕೈಗಾರಿಕೆಗಳಿಗೆ ಉಪಯುಕ್ತವಾದ ಮಾಹಿತಿಯನ್ನು ಒಳಗೊಂಡ ಕೈಗಾರಿಕಾ ಕ್ಯಾಲೆಂಡರ್ ಅನ್ನು ಸಂಘವು ಪ್ರಕಟಿಸಿರುವುದಕ್ಕೆ ಶ್ಲಾಘಿಸಿದರು.

ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್  ಮಾತನಾಡಿ ಉದ್ಯೋಗ್ ಆಧಾರ್ ನೋಂದಣಿ ಪಡೆದಿರುವ ಎಲ್ಲಾ ಉದ್ಯಮಿಗಳಿಗೆ ರೂ.25 ಮೌಲ್ಯದ 10,000 ಕೈಗಾರಿಕಾ ಕ್ಯಾಲೆಂಡರ್ ಗಳನ್ನು ಉಚಿತವಾಗಿ ನೀಡಲಿದ್ದೇವೆ ಎಂದರು.

ಸಮಾರಂಭದಲ್ಲಿ ಲೋಕಸಭಾ ಸದಸ್ಯ ಆರ್.ಧ್ರುವನಾರಾಯಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ  ಸಿದ್ದರಾಜು, ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ  ಎ.ಎಲ್. ಪುಷ್ಪ, ಕೆ.ಐ.ಎ.ಡಿ.ಬಿ ಮುಖ್ಯ ಅಭಿವೃದ್ಧಿ ಅಧಿಕಾರಿ  ಟಿ.ಆರ್. ಸ್ವಾಮಿ, ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಹೆಚ್. ರಾಮಕೃಷ್ಣೇಗೌಡ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ತಿನ ಅಧ್ಯಕ್ಷ ಟಿ.ಡಿ. ಜಯಚಂದ್ರ ಅರಸ್ ಮತ್ತಿತರರು ಉಪಸ್ಥಿತರಿದ್ದರು.

 

 

 

 

 

Leave a Reply

comments

Related Articles

error: