ಮೈಸೂರು

ಚಲನಚಿತ್ರೋತ್ಸವದಲ್ಲಿ ಇಂದು

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಐದನೇ ದಿನವಾದ ಫೆ.7 ರಂದು ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದಲ್ಲಿ  ಈ ಚಿತ್ರಗಳು ಪ್ರದರ್ಶನಗೊಳ‍್ಳಲಿವೆ.

ಪರದೆ 1 : ಬೆಳಿಗ್ಗೆ 10 ಗಂಟೆಗೆ ಕನ್ನಡ ಭಾಷೆಯ ‘ ಕಂದ’, ಮಧ‍್ಯಾಹ್ನ 12.30 ಕ್ಕೆ ‘ ಬೆಕ್ಕು’, ಮಧ‍್ಯಾಹ್ನ 3 ಗಂಟೆಗೆ ‘ರಾಮ ರಾಮ ರಾಮರೇ’, ಸಂಜೆ 5.30 ಕ್ಕೆ ಲೆಬೆನಾನ್ ನ ‘ವೆರಿ ಬಿಗ್ ಶಾಟ್’, ರಾತ್ರಿ 7.45 ಕ್ಕೆ ಕನ್ನಡದ ‘ಉಪ್ಪಿನ ಕಾಗದ’.

ಪರದೆ 2 : ಬೆಳಿಗ್ಗೆ 10.10 ಕ್ಕೆ ‘ಚಿತ್ರೋಕಾರ್’, ಮಧ್ಯಾಹ್ನ 12.45 ಕ್ಕೆ ಕನ್ನಡದ ‘ಜಗ್ಗುದಾದ’, ಮಧ‍್ಯಾಹ್ನ 3.15 ಕ್ಕೆ ಅಮೇರಿಕಾದ ‘ಚಿಲ್ಲನ್ ಆಫ್ ದ ಮೌಂಟನ್’, ಸಂಜೆ 5.45 ಕ್ಕೆ ಟರ್ಕಿಯಾದ ‘ಕೋಲ್ಡ್ ಆಫ್ ಕಲಿನ್ದಾರ್’, ರಾತ್ರಿ 8 ಕ್ಕೆ ಕನ್ನಡದ ‘ಕೋಟಿಗೊಬ್ಬ 2’.

ಪರದೆ 3 : ಬೆಳಿಗ್ಗೆ 10.20 ಕ್ಕೆ ಇಂಡೋನೇಷ್ಯಾದ ‘ಲೆಟರ್ಸ್ ಫ್ರಂ ಪ್ರಾಗ್’, ಮಧ್ಯಾಹ್ನ 1.15 ಕ್ಕೆ ಥೈಲ್ಯಾಂಟಡ್ ನ ‘ಬೈ ದ ಟೈಮ್ ಇಟ್ ಗೆಟ್ಸ್ ಡಾರ್ಕ್’, ಮಧ‍್ಯಾಹ್ನ 3.45 ಕ್ಕೆ ಕಿರ್ಗಿಸ್ತಾನ್ ನ ‘ಫಾದರ್ಸ್ ವಿಲ್’, ಸಂಜೆ 6 ಕ್ಕೆ ಮಯನ್ಮಾರ್ ನ ‘ದ ರೋಡ್ ಟು ಮ್ಯಾಂಡಲೇ’. ರಾತ್ರಿ 8.15 ಕ್ಕೆ ಶ್ರೀಲಂಕಾದ ‘ಲೆಟ್ ಅರೋಸ್’.

ಪರದೆ 4 : ಬೆಳಿಗ್ಗೆ 10.10 ಕ್ಕೆ ಕನ್ನಡದ ‘ದೊಡ್ಮನೆ ಹುಡ್ಗ’, ಮಧ್ಯಾಹ್ನ 12.45 ಕ್ಕೆ ಭಾರತದ ‘ರಿವಿಲೇಷನ್’, ಮಧ‍್ಯಾಹ್ನ 3.15 ಕ್ಕೆ ‘ಕಾಡು ಪೊಕ್ಕುಣ್ಣ ನೇರಣ್’, ಸಂಜೆ 5.45 ಕ್ಕೆ ನೇಪಾಳದ ‘ವೈಟ್ ಸನ್’, ರಾತ್ರಿ 8 ಗಂಟೆಗೆ ಕನ್ನಡದ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಚಲನಚಿತ್ರೋತ್ಸವ ಪ್ರಾರಂಭವಾದಂದಿನಿಂದ  ಕನ್ನಡ ಚಲನಚಿತ್ರಗಳು ಪ್ರದರ್ಶನ ಕಂಡಿರಲಿಲ್ಲ. ಇಂದು ಕನ್ನಡ ಚಿತ್ರಗಳಾದ ಕಂದ, ಬೆಕ್ಕು, ರಾಮಾ ರಾಮಾ ರೇ, ಉಪ್ಪಿನ ಕಾಗದ, ಜಗ್ಗುದಾದ, ಕೋಟಿಗೊಬ್ಬ-2, ದೊಡ್ಮನೆ ಹುಡ್ಗ, ಸಂತೆಯಲ್ಲಿ ನಿಂತ ಕಬೀರ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಕನ್ನಡ ಸಿನಿ ಪ್ರೇಮಿಗಳಿಗೆ ಹರ್ಷ ತಂದಿದೆ.

ಸಂವಾದ : ಬೆಕ್ಕು ಚಿತ್ರದ ನಿರ್ಮಾಪಕ ಕುಮಾರ್ ಗೋವಿಂದ್, ಉಪ್ಪಿನ ಕಾಗದ ಚಿತ್ರದ ನಿರ್ದೇಶಕ ಬಿ.ಸುರೇಶ್, ಕಾಡು ಚಿತ್ರದ ನಿರ್ದೇಶಕ ಡಾ.ಬಿಜುಕುಮಾರ್ ದಾಮೋದರ್ ಅವರು ಚಲನಚಿತ್ರ ಪ್ರದರ್ಶನದ ನಂತರ ಪ್ರೇಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ.

Leave a Reply

comments

Related Articles

error: