ಮೈಸೂರು

ಪ್ರಿಯತಮೆಯ ನಗ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ : ಹೆದರಿದ ಪ್ರಿಯಕರ ಆತ್ಮಹತ್ಯೆ

ಮೈಸೂರು,ಮೇ.25:- ಪ್ರಿಯತಮೆಯ ನಗ್ನ ವಿಡಿಯೋ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಅಪ್ಲೋಡ್ ಆಗಿದ್ದು, ಅವಮಾನಕ್ಕೆ ಹೆದರಿ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗಿರೀಶ್ ಆತ್ಮಹತ್ಯೆಗೆ ಶರಣಾದ ಯುವಕ. ನಂಜನಗೂಡು ತಾಲೂಕು ಮಲ್ಲುಪುರ ಗ್ರಾಮದ ನಿವಾಸಿಯಾಗಿರುವ ಗಿರೀಶ್, ಟಿವಿಎಸ್ ಕಾರ್ಖಾನೆಯ ಉದ್ಯೋಗಿಯಾಗಿದ್ದ. ಗಿರೀಶ್ ಕಾರ್ಯ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.

ಆಕ್ಷೇಪಾರ್ಹ ವಿಡಿಯೋವನ್ನು ಪ್ರೇಮಿಗಳೇ ತಮ್ಮ ಮೊಬೈಲ್ ನಲ್ಲಿ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಯುವತಿಯೇ ಬೆತ್ತಲಾಗಿ ತೆಗೆದ ಸೆಲ್ಫಿ ವಿಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿ ವೈರಲ್ ಆಗುತ್ತಿದ್ದಂತೆ ಹೆದರಿದ ಗಿರೀಶ್ ಅತಿಯಾಗಿ ಮಾತ್ರೆ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಮೃತ ಗಿರೀಶನ ಪಾಲಕರು ಹೊಟ್ಟೆನೋವಿನಿಂದ ಆತ ಬಳಲುತ್ತಿದ್ದನೆಂದು ಕಾರಣ ಹೇಳುತ್ತಿದ್ದಾರೆ. ಅತ್ತ ಗಿರೀಶ್ ಸಾವಿನ ನಂತರ ಕಾರ್ಯ ಗ್ರಾಮದಿಂದ ಯುವತಿಯೂ ನಾಪತ್ತೆಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: