ಪ್ರಮುಖ ಸುದ್ದಿಮೈಸೂರು

ರಾಜಹಂಸ ಬಸ್ ಪಲ್ಟಿ : ತುಂಡರಿಸಿ ಬಿದ್ದ ಕೈ

ರಾಜಹಂಸ ಬಸ್ ಪಲ್ಟಿಯಾದ ಪರಿಣಾಮ ನಾಲ್ವರು ಪ್ರಯಾಣಿಕರ ಕೈ ತುಂಡರಿಸಿ ಬಿದ್ದಿದ್ದು,  ಇಬ್ಬರ ಕೈ ಮೂಳೆ ಮುರಿತಕ್ಕೊಳಗಾದ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಸೋಮವಾರ ರಾತ್ರಿ ತ್ರಿಶೂರ್ ನಿಂದ  ಹೊರಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಘಟಕಕ್ಕೆ ಸೇರಿದ ರಾಜಹಂಸ ಬಸ್  ಮಂಗಳವಾರ ಬೆಳಿಗ್ಗೆ 4.30ರ ಸುಮಾರಿಗೆ ನಂಜನಗೂಡಿನ ಗೊಳೂರು ತಿರುವಿನಲ್ಲಿ ಅಧಿಕ ವೇಗವಾಗಿ ಬಂದ ಪರಿಣಾಮ ಪಲ್ಟಿ ಹೊಡೆದಿದೆ. ಬಿದ್ದ ರಭಸಕ್ಕೆ ನಾಲ್ವರ ಕೈ ತುಂಡರಿಸಿ ಬಿದ್ದಿದ್ದು, ಇಬ್ಬರ ಕೈ ಮೂಳೆ ಮುರಿತಕ್ಕೊಳಗಾಗಿದೆ.  ಬಸ್ ನಲ್ಲಿ ಒಟ್ಟು 48ಜನ ಪ್ರಯಾಣಿಕರಿದ್ದು, ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಕೆ.ಆರ್.ಆಸ್ಪತ್ರೆ ಮತ್ತು ಕೊಲಂಬಿಯಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಕೈ ಮೂಳೆ ಮುರಿತಕ್ಕೊಳಗಾದ ಇದಾಯತ್ (48) ಮಾತನಾಡಿ ಬಸ್ಸು ವೇಗವಾಗಿ ಚಲಿಸುತ್ತಿತ್ತು. ಬೆಂಗಳೂರನ್ನು ಬೆಳಿಗ್ಗೆ 7ಗಂಟೆಗೆ ತಲುಪಬೇಕಾಗಿತ್ತು. ಒಂದು ಕ್ಷಣ ಏನಾಯಿತು ಅಂತ ಗೊತ್ತಾಗಲೇ ಇಲ್ಲ. ಬಸ್ ಪಲ್ಟಿಯಾಗಿತ್ತು ಎಂದರು. ಗಾಯಾಳುಗಳ ಮನೆಯವರನ್ನು ಅವರ ಸಂಚಾರಿ ದೂರವಾಣಿ ಮೂಲಕ ಸಂಪರ್ಕಿಸಲಾಗಿದೆ ಎಂದು ತಿಳಿದುಬಂದಿದೆ.

ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರೇನ್ ಸಹಾಯದಿಂದ ಬಸ್ ನ್ನು ಮೇಲಕ್ಕೆತ್ತಿಸಿದರಲ್ಲದೇ, ಪ್ರಯಾಣಿಕರನ್ನು ಹೊರತೆಗೆದರು. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

comments

Related Articles

error: