ಮೈಸೂರು

ಕುಡಿಯುವ ನೀರಿಗೆ ಸಮಸ್ಯೆ : ಖಾಲಿ ಬಿಂದಿಗೆ ಹಿಡಿದು ಗ್ರಾ.ಪಂ.ಎದುರು ಗ್ರಾಮಸ್ಥರಿಂದ ಪ್ರತಿಭಟನೆ

ಮೈಸೂರು,ಮೇ.25:- ಹಿನಕಲ್ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿ ಮೂರು ತಿಂಗಳು ಕಳೆದರೂ ಸೂಕ್ತ ಕ್ರಮವಹಿಸದ ಗ್ರಾಮಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ   ಗ್ರಾಮಸ್ಥರು ಖಾಲಿ ಬಿಂದಿಗೆ ಹಿಡಿದು ಇಂದು  ಗ್ರಾ.ಪಂ.ಎದುರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತರು ಮಾತನಾಡಿ ಗ್ರಾಮಪಂಚಾಯತ್ ಸದಸ್ಯರಾದವರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.  ಒಂದು ಟ್ಯಾಂಕರ್ ನೀರು ಹಾಕಿ ಮತ್ತೆ ಒಂದು ವಾರ ಅತ್ತ ಸುಳಿಯೋದೆ ಇಲ್ಲ. ಒಂದು ಟ್ಯಾಂಕರ್ ನಲ್ಲಿ ನೀರು ತಂದು ಕೊಟ್ಟು ಹೋದರೆ ಎಷ್ಟು ದಿನ ಬರತ್ತೆ.  ಪಿಡಿಒ ಬರುತ್ತೇನೆ ಹೇಳಿ ಏನೂ ಮಾಡಿಲ್ಲ. ಪಿಡಿಓನೂ ಸರಿ ಇಲ್ಲ. ಯಾರೂ ಸರಿ ಇಲ್ಲ. ನೀರು ಬಿಟ್ಟು 20 ದಿನ ಆಯ್ತು. ನಲ್ಲಿಯಲ್ಲಿ ನೀರು ಬಿಟ್ಟು ಆರು ತಿಂಗಳಾಯಿತು. ನಮಗೂ ಹೇಳಿ ಹೇಳಿ ಸಾಕಾಗಿದೆ. ಗ್ರಾಮಪಂಚಾಯತ್ ನವರು ಏನೂ ಮಾಡದಿದ್ದರೆ ಗ್ರಾಮ ಪಂಚಾಯತ್ ಯಾಕೆ ಅದಕ್ಕೆ ಬೀಗ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೀರು ಕೊಡುವವರೆಗೂ ನಾವು ಸ್ಥಳದಿಂದ ಕದಲುವುದಿಲ್ಲವೆಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: