ಮೈಸೂರು

ರೌಡಿಶೀಟರ್ ಅಶೋಕ್ ಅಲಿಯಾಸ್ ಪೈ ಕೊಲೆಗೆ ಯತ್ನ

ಜಡೇಜಾ ರವಿ ಕೊಲೆ ಪ್ರಕರಣದಲ್ಲಿ ಸಿಲುಕಿ ಇತ್ತೀಚೆಗೆ ಜೈಲಿನಿಂದ ಹೊರಬಂದ ರೌಡಿ ಶೀಟರ್ ಅಶೋಕ್  ಅಲಿಯಾಸ್ ಪೈ ಕೊಲೆಗೆ ಯತ್ನ ನಡೆದಿದೆ.

ಮಂಡ್ಯ ಜಿಲ್ಲೆ ಮಾದರಹಳ್ಳಿಯಲ್ಲಿ ಪತ್ನಿ ಮನೆಯಲ್ಲಿದ್ದ ಅಶೋಕ್ ಅಲಿಯಾಸ್  ಪೈ ಮೇಲೆ  ಸೋಮವಾರ  ತಡರಾತ್ರಿ ಮೂವತ್ತಕ್ಕೂ ಹೆಚ್ಚು ರೌಡಿಗಳು ಆಕ್ರಮಣವೆಸಗಿ ಹತ್ಯೆಗೆ ಯತ್ನಿಸಿದ್ದು,  ಸುಮಾರು 30 ನಿಮಿಷ ಸೆಟಸಾಟ ನಡೆಸಿದ ಅಶೋಕ್  ಅಲಿಯಾಸ್ ಪೈ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.

ಆತನ ಹತ್ಯೆಯ ಸಂಚನ್ನು ಜಡೇಜಾ ಪರಮಾಪ್ತ ಮಂಜುನಾಥ್ ನಡೆಸಿರಬೇಕೆಂದು ಶಂಕಿಸಲಾಗಿದ್ದು, ಇದೀಗ ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.  ರೌಡಿ ನಿಗ್ರಹದಳ ರೌಡಿಶೀಟರ್ ಗಳ ಮೇಲೆ ಹದ್ದಿನ ಕಣ್ಣಿರಿಸಿದ್ದು, ಪ್ರಮುಖ ಬೀದಿ, ಪ್ರಮುಖ ವಸತಿಗೃಹಗಳ ತಪಾಸಣೆ ನಡೆಸಿದೆ.

ಅಶೋಕ್  ಅಲಿಯಾಸ್ ಪೈ ಹತ್ಯೆ ಯತ್ನ ನಡೆದ ಸ್ಥಳಕ್ಕೆ ಭೇಟಿ ನೀಡಿದ  ಕೆ.ಎಂ.ದೊಡ್ಡಿ ಪೊಲೀಸರು ಸ್ಥಳದಲ್ಲಿದ್ದ ಒಂದು ಮೊಬೈಲ್, ಲಾಂಗ್, ಖಾರದ ಪುಡಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಜುನಾಥ್ ಮತ್ತವರ ಸಹಚರರನ್ನು ಬಂಧಿಸಲು ಪಣ ತೊಟ್ಟಿರುವ ಪೊಲೀಸರು ಎಲ್ಲೆಡೆ ಬಿಗು ಬಂದೋಬಸ್ತ್ ಏರ್ಪಡಿಸಿ ಸರ್ಪಗಾವಲು ಹಾಕಿದ್ದಾರೆ. ಹಳೆ ವೈಷಮ್ಯವೇ ಅಶೋಕ್  ಅಲಿಯಾಸ್ ಪೈ ಕೊಲೆ ಯತ್ನಕ್ಕೆ ಕಾರಣ ಎಂದು ತಿಳಿದುಬಂದಿದೆ.

Leave a Reply

comments

Related Articles

error: