ಮೈಸೂರು

ಅವಧೂತ ಗಣಪತಿ‌ ಸಚ್ಚಿದಾನಂದ ‌ಸ್ವಾಮೀಜಿಯವರ 77ನೇ ಜನ್ಮದಿನ ಸಸಿ ನೆಡುವ ಮೂಲಕ ಆಚರಣೆ

ಮೈಸೂರು,ಮೇ.26:- ಅವಧೂತ ಗಣಪತಿ‌ ಸಚ್ಚಿದಾನಂದ ‌ಸ್ವಾಮೀಜಿಯವರ 77ನೇ ಹುಟ್ಟುಹಬ್ಬದ ಅಂಗವಾಗಿ‌ ಇಂದು ಮೈಸೂರು‌ ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ರಾಮಾನುಜ ರಸ್ತೆಯಲ್ಲಿರುವ ರಾಜರಾಮ ಅಗ್ರಹಾರದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು.

ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್   ಮಾತನಾಡಿ ಪ್ರಪಂಚದಲ್ಲಿ ಮನುಷ್ಯ ಬದುಕಲು ಆಮ್ಲಜನಕ ಮುಖ್ಯವಾದರೆ ಜೀವನ ಸಾಗಿಸಲು ಅಕ್ಷರ, ಆಹಾರ, ಆರೋಗ್ಯ ಅನಿವಾರ್ಯ.  ಸಾಮಾಜಿಕ ಕ್ಷೇತ್ರದ ಮೂಲಕ ಲಕ್ಷಾಂತರ ಜನರಿಗೆ ಗಣಪತಿ ಸಚ್ಚಿದಾನಂದ ಶ್ರೀಗಳು ಲಕ್ಷಾಂತರ ಜನರ ಪಾಲಿಗೆ ತೊಂದರೆಯನ್ನು ನಿವಾರಿಸಿ ಆತ್ಮ ಸ್ಥೈರ್ಯ ನೀಡುವ ಕಲಿಯುಗದ ದೇವರಾಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮ ಕೀರ್ತಿ ಸಂಪಾದಿಸಿ ಜನಪ್ರಿಯವಾಗಿರುವುದು ಮೈಸೂರಿಗೆ ಹೆಮ್ಮೆಯ ವಿಚಾರ. ಸರ್ಕಾರ ಮಾಡದ ನೂರಾರು ಜನಪರ ಯೋಜನೆಗಳನ್ನು ಸ್ವಾಮೀಜಿಗಳು ಮಾಡಿದ್ದಾರೆ. ಯುವಕರು ಮತ್ತು ಗಿಡಮರಗಳ ಹಸಿರುವಲಯ ಹೆಚ್ಚಿದ್ದರೆ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗುತ್ತದೆ. ಮನೆಗೊಂದು ಗಿಡ ಎಂಬಂತೆ ಪ್ರತಿಯೊಬ್ಬರು ಹತ್ತು ಗಿಡಗಳನ್ನು ಪೋಷಿಸಿದರೆ ಸಮಾಜದಲ್ಲಿ ಆರೋಗ್ಯಕರ ವಾತಾವರಣವಿರುತ್ತದೆ.  ಇದರಿಂದ ತಾಪಮಾನ ನಿಯಂತ್ರಿಸಬಹುದು ಎಂದರು.

ಸಸಿ ನೆಡುವ ಕಾರ್ಯಕ್ರಮದಲ್ಲಿ  ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಯುವ ಮುಖಂಡರಾದ ಅಜಯ್ ಶಾಸ್ತ್ರಿ, ಅಪೂರ್ವ ಸುರೇಶ್, ವಿನಯ್ ಕಣಗಾಲ್,  ಚಕ್ರಪಾಣಿ, ಡಿ.ಕೆ. ನಾಗಭೂಷ್, ವಿಜಯಕುಮಾರ್, ಸುಚೀಂದ್ರ, ಮುಂತಾದವರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: