ಮೈಸೂರು

ಕುವೆಂಪು ನಗರ 17ನೇ ವಾರ್ಡ್ ಗೆ ನಂದೀಶ್ ಪ್ರೀತಂ ದಿಢೀರ್ ಭೇಟಿ

ಮೈಸೂರಿನ ಕುವೆಂಪುನಗರದ 17ನೇ ವಾರ್ಡ್ ಗೆ ಮಂಗಳವಾರ ಬೆಳಿಗ್ಗೆ  ಮಹಾನಗರಪಾಲಿಕೆಯ ಪಟ್ಟಣ ಮತ್ತು ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ್ ಪ್ರೀತಂ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುವೆಂಪುನಗರದ 17ನೇ ವಾರ್ಡ್ ಗೆ ಭೇಟಿ ನೀಡಿದ ನಂದೀಶ್ ಪ್ರೀತಂ ಅಲ್ಲಿನ ಒಳಚರಂಡಿ, ನೀರು, ಫುಟ್ ಪಾತ್, ಪಾರ್ಕ್  ಕುರಿತಂತೆ ಏನಾದರೂ ಸಮಸ್ಯೆಗಳಿವೆಯೇ ಎನ್ನುವ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಅಷ್ಟೇ ಅಲ್ಲದೇ ಸರ್ಕಾರಿ ಜಾಗಗಳು ಎಲ್ಲಾದರೂ ಅತಿಕ್ರಮಣಗೊಂಡಿವೆಯೇ ಎನ್ನುವುದನ್ನು ಪರಿಶೀಲಿಸಿದರು. ಯಾವುದಾದರೂ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೆ, ಅವರು ಮಹಾನಗರ ಪಾಲಿಕೆಯ ಅನುಮತಿ ಪಡೆದಿದ್ದಾರೋ ಇಲ್ಲವೋ ಎಂಬ ವಿವರವನ್ನು ಪಡೆದರು.

ಬಳಿಕ ಮಾತನಾಡಿದ ಅವರು ಇನ್ನು ಮುಂದೆ ನಿರಂತರವಾಗಿ ಎಲ್ಲ ವಾರ್ಡ್ ಗಳಿಗೂ ಭೇಟಿ ನೀಡುತ್ತೇನೆ. ಅಪ್ಪಾಜಿ ಶಂಕರನಿಂಗೇ ಗೌಡರ ಆದರ್ಶಗಳನ್ನು ರೂಢಿಸಿಕೊಳ್ಳುತ್ತೇನೆ. ಜನತೆ ನಮ್ಮ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿ ಕಳುಹಿಸಿರುತ್ತಾರೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಪ್ರತಿ ವಾರ್ಡ್ ನ ಜನರ ಸಮಸ್ಯೆಗೆ ಸ್ಪಂದಿಸುತ್ತೇನೆ. ಪಾಲಿಕೆಯ ಅನುಮತಿಯಿಲ್ಲದೇ ಯಾವುದಾದರೂ ಅನಧಿಕೃತ ಕಾಮಗಾರಿಗಳು ನಡೆದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

ಈ ಸಂದರ್ಭ ಪಾಲಿಕೆಯ ಸದಸ್ಯ ಸ್ನೇಕ್ ಶ್ಯಾಂ, ಅಧಿಕಾರಿಗಳಾದ ಗೋವಿಂದಪ್ಪ, ರಾಜೇಶ್, ಪ್ರಭಾಕರ್, ಚೇತನ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: