ಕರ್ನಾಟಕ

ಅಪಘಾತ: ಪತ್ರಿಕಾ ವಿತರಕ ಸಾವು

ಕಾಸರಗೋಡು,ಮೇ 27-ಬೈಕ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಪತ್ರಿಕಾ ವಿತರಕ ಮೃತಪಟ್ಟಿರುವ ಘಟನೆ ಬೇಕಲ ಸಮೀಪದ ಕುನಿಯ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಪನಯಾಲ್ ನಿವಾಸಿ ರತೀಶ್ (26) ಮೃತಪಟ್ಟವರು. ಪತ್ರಿಕಾ ವಿತರಕರಾಗಿದ್ದ ರತೀಶ್ ಇಂದು ಬೆಳಿಗ್ಗೆ ಪತ್ರಿಕೆ ವಿತರಿಸಲು ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರತೀಶ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಮೃತಪಟ್ಟಿದ್ದರು. (ಎಂ.ಎನ್)

Leave a Reply

comments

Related Articles

error: