ಪ್ರಮುಖ ಸುದ್ದಿಮೈಸೂರು

ರಿಜ್ವಾನ್ ಅರ್ಷದ್ ಸೋಲಿಗೆ ರೋಷನ್ ಬೇಗ್ ನೇರ ಹೊಣೆ : ಅಯೂಬ್ ಖಾನ್

ಮೈಸೂರು,ಮೇ.27 : ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ರಿಜ್ವಾನ್ ಅರ್ಷದ್ ಅವರನ್ನು ಸೋಲಿಸುವ ಮೂಲಕ ಮಾಜಿ ಸಚಿವ ರೋಷನ್ ಬೇಗ್ ಅಲ್ಪ ಸಂಖ್ಯಾತ ಸಮಾಜಕ್ಕೆ ದ್ರೋಹವೆಸಗಿದ್ದಾರೆ ಎಂದು ಭಾರತೀಯ ಹೊಸ ಕಾಂಗ್ರೆಸ್ ಪಕ್ಷದ ರಾಷ್ಯಾಧ್ಯಕ್ಷ ಅಯೂಬ್ ಖಾನ್ ಆರೋಪಿಸಿದರು.

ರಿಜ್ವಾನ್ ಸೋಲಿಗೆ ರೋಷನ್ ಬೇಗ್ ನೇರ ಹೊಣೆಯಾಗಿದ್ದು, ಸಮಾಜದಲ್ಲಿ ಮತ್ತೊಬ್ಬ ನಾಯಕನನ್ನು ಬೆಳೆಯಲು ಬಿಡದ ಸ್ವಾರ್ಥ ರಾಜಕಾರಣಿ, ಅಲ್ಪಸಂಖ್ಯಾತರ ಮತ ಪಡೆದು ಅಧಿಕಾರ ನಡೆಸಿ ಅವರಿಂದು ಬಿಜೆಪಿ ಸೇರುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವ ನಾಯಕರ ಬೆನ್ನಿಗೆ ಚೂರಿ ಹಾಕಿದ್ದಾರೆ, ಇದು ಅವರ ರಾಜಕಾರಣದ ಕೊನೆಯ ದಿನಗಳಾಗಿವೆ ಎಂದು ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ರಿಜ್ವಾನ್ ಅವರಿಗೆ ಕಾಂಗ್ರೆಸ್ ನಲ್ಲಿ ಅನ್ಯಾಯವಾಗಿದ್ದು ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಬೇಕೆಂದು ಆಹ್ವಾನ ನೀಡಿದರು. ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ್ದ ತಮಗೆ ಅಲ್ಪಸಂಖ್ಯಾತರಿಗಿಂತ ಬಹುಸಂಖ್ಯಾತರು ಹೆಚ್ಚಿನ ಮತ ನೀಡಿದ್ದಾರೆ ಎಂದು ತಿಳಿಸಿದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ವಿಗಳಿಸಿರುವುದಕ್ಕೆ ಅಭಿನಂದಿಸಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: