ಕರ್ನಾಟಕಪ್ರಮುಖ ಸುದ್ದಿ

ಸರ್ಕಾರಿ ನೌಕರರ ಸಂಘದ ಚುನಾವಣಾಧಿಕಾರಿ ನೇಮಕ

ಹಾಸನ (ಮೇ 25): ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2019-20ನೇ ಸಾಲಿನ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಯು ಮೇ.27 ರಿಂದ ಜೂನ್.13ರ ವರೆಗೆ ಕಾರ್ಯಾಕಾರಿ ಸಮಿತಿ ಚುನಾವಣೆ, ಹಾಗೂ ಜುಲೈ 30ರೊಳಗೆ ನಡೆಯುವ ಜಿಲ್ಲಾಧ್ಯಕ್ಷರ ಚುನಾವಣೆಯವರೆಗೂ ಚುನಾವಣೆ ವೇಳಾ ಪಟ್ಟಿಯಂತೆ ಚುನಾವಣೆ ಕರ್ತವ್ಯವನ್ನು ನಡೆಸುವಂತೆ ಕೇಂದ್ರ ಸಂಘದ ಚುನಾವಣಾಧಿಕಾರಿಯು ಆದೇಶಿಸಿರುವ ಅನ್ವಯ ಹಾಗೂ ಕೇಂದ್ರ ಸಂಘದ ರಾಜ್ಯಾಧ್ಯಕ್ಷರಾದ ಹೆಚ್.ಕೆ.ರಾಮುರವರ ಅನುಮೋದನೆಯಂತೆ ಹಾಸನ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆಯನ್ನು ನಡೆಸಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಗೋವಿಂದರಾಜು ಬಿ.ಎ ಇವರನ್ನು ನೇಮಕ ಮಾಡಿಕೊಂಡಿರುವುದಾಗಿ ಅಧ್ಯಕ್ಷರಾದ ಕೆ.ಎಂ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಚುನಾವಣಾಧಿಕಾರಿಯವರ ದೂರವಾಣಿ ಅಥವಾ ಮೊ.ಸಂಖ್ಯೆ: 7019653924, 9743339877 ಅನ್ನು ಸಂಪರ್ಕಿಸುವಂತೆ ಅಧ್ಯಕ್ಷರಾದ ಕೆ.ಎಂ.ಶ್ರೀನಿವಾಸ್ ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: