ಮನರಂಜನೆ

ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಸಂಭಾವನೆ ದುಪ್ಪಟ್ಟು !

ರಾಜ್ಯ(ಬೆಂಗಳೂರು)ಮೇ.27:- ಕಡಿಮೆ ಅವಧಿಯಲ್ಲಿಯೇ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸೆನ್ಸೇಶನ್ ಸೃಷ್ಟಿಸಿದ ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ.

ಇದೀಗ ಅವರು ಸಟಾರ್ ಹೀರೋಗಳ ಮೊದಲ ಆಯ್ಕೆಯಾಗಿದ್ದು, ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿ ಮಿಂಚುತ್ತಿದ್ದಾರೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣುತ್ತಿದ್ದಂತೆಯೇ ತನ್ನ ಸಂಭಾವನೆಯನ್ನೂ ಏರಿಸಿಕೊಂಡಿದ್ದಾರೆ. ಮೊದಲು ಒಂದು ಚಿತ್ರಕ್ಕೆ 40ಲಕ್ಷರೂ.ಸಂಭಾವನೆ ಪಡೆಯುತ್ತಿದ್ದ ರಶ್ಮಿಕಾ ಇದೀಗ ಕೈಯ್ಯಲ್ಲಿರುವ ಹಲವು ಪ್ರಾಜೆಕ್ಟ್ ಗಳಿಗೆ 80ಲಕ್ಷರೂ.ಪಡೆಯುತ್ತಿದ್ದಾರಂತೆ. ಟಾಲಿವುಡ್ ಮೂಲಗಳು ಇದನ್ನು ನಿಜ ಅನ್ನುತ್ತಿವೆ. ರಶ್ಮಿಕಾ ಒಪ್ಪಿಕೊಂಡ ಎಲ್ಲ ಚಿತ್ರಗಳಲ್ಲಿಯೂ ಸ್ಟಾರ್ ನಾಯಕರೇ ಹೀರೋಗಳಂತೆ. ಅಲ್ಲು ಅರ್ಜುನ್, ಮಹೇಶ್ ಬಾಬು, ಕಾರ್ತಿ, ನಿತಿನ ಜೊತೆಗೆ ನಟಿಸುವುದು ಪಕ್ಕಾ ಆಗಿದೆ. ಈ ನಟರ ಚಿತ್ರಗಳು ಬಾಕ್ಸ್ ಆಫೀಸ್ ನ್ನು ಚಿಂದಿ ಉಡಾಯಿಸುತ್ತವೆ. ಚಿತ್ರ ಕೋಟಿ, ಕೋಟಿ ಹಣ ಗಳಿಕೆ ಮಾಡುತ್ತದೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ರಶ್ಮಿಕಾ ಕೂಡ ತನ್ನ ಸಂಭಾವನೆಯಲ್ಲಿ ಹೆಚ್ಚಳ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಒಪ್ಪಿಕೊಂಡ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದರೆ ಮುಂದಿನ ದಿನಗಳಲ್ಲಿ ಅವರ ಸಂಭಾವನೆ ಕೋಟಿ ದಾಟಿದರೂ ಅಚ್ಚರಿ ಪಡಬೇಕಿಲ್ಲ. ಈಗ ಅವರು ‘ಪೊಗರು’ ಕನ್ನಡ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರಂತೆ. (ಎಸ್.ಎಚ್)

Leave a Reply

comments

Related Articles

error: