ಕರ್ನಾಟಕಪ್ರಮುಖ ಸುದ್ದಿ

ಶ್ರೀನಿವಾಸ್​ ಪ್ರಸಾದ್​ ಪ್ರಶ್ನೆ: ಮೈತ್ರಿ ಪಕ್ಷಗಳ ನಡುವೆ ನಂಬಿಕೆಯೇ ಇಲ್ಲ, ಸರ್ಕಾರ ಹೇಗೆ ನಡೆಯತ್ತೆ?

ಬೆಂಗಳೂರು (ಮೇ 27): ಚಾಮರಾಜನಗರ ಕ್ಷೇತ್ರದ ನೂತನ ಸಂಸದ ವಿ. ಶ್ರೀನಿವಾಸ್​ ಪ್ರಸಾದ್​ ಅವರು, ಕಾಂಗ್ರೆಸ್​ – ಜೆಡಿಎಸ್​ ಸಮ್ಮಿಶ್ರ ಸರ್ಕಾರ ಮುಂದುವರೆಯುವುದಿಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ದೋಸ್ತಿ ಎಂಬ ಪದಕ್ಕೆ ಅಪಮಾನ ಆಗಿದೆ. ಅವರಲ್ಲೇ ಅಪನಂಬಿಕೆ ಇರುವಾಗ ಹೇಗೆ ಮುಂದುವರೀತಾರೆ ಅನ್ನೋದೇ ಗೊತ್ತಾಗುತ್ತಿಲ್ಲ. ಅತೃಪ್ತ ಶಾಸಕರಿಗೆ ನಾಲ್ಕೈದು ಜನರಿಗೆ ಸಚಿವ ಸ್ಥಾನ ಕೊಡಲು ಹೊರಟಿದ್ದಾರೆ. ಆಗ ಇನ್ನೊಂದು ಇಪ್ಪತ್ತು ಜನರ ಅಸಮಾಧಾನ ಭುಗಿಲೇಳುತ್ತದೆ. ಅವರ ಸೋಲಿಗೆ ಕಾರಣ ಏನು ಅಂತಾ ಇನ್ನೂ ಅವರಿಗೇ ಗೊತ್ತಾಗುತ್ತಿಲ್ಲ, ಬರೀ ಅಧಿಕಾರ ದಾಹವಷ್ಟೇ ಅವರಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ತಾವು ರಾಜ್ಯದಿಂದ ಆಯ್ಕೆಯಾದ ಸಂಸದರಲ್ಲಿ ಅತೀ ಕಡಿಮೆ ಅಂತರದಿಂದ ಗೆದ್ದವರು ಎಂದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ಲಾಬಿ ಮಾಡುವುದಿಲ್ಲ. ಹೈಕಮಾಂಡ್​ ಜವಾಬ್ದಾರಿ ನೀಡಿದರೆ ನಿರ್ವಹಿಸುತ್ತೇನೆ, ಇಲ್ಲವಾದಲ್ಲಿ ಒತ್ತಾಯ ಮಾಡುವುದಿಲ್ಲ ಎಂದಿದ್ಧಾರೆ. ರಾಜ್ಯದಲ್ಲಿ ಅತ್ಯಂತ ಕಡಿಮೆ ಮತಗಳಿಂದ ಗೆದ್ದವನು, ನಾನು ಚುನಾವಣೆಗೆ ಮೊದಲೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದೆ. ನಾನು ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನು ಮಂತ್ರಿಗಿರಿಗೆ ಯಾವತ್ತೂ ಲಾಬಿ ಮಾಡಿದವನಲ್ಲ. ಕೊಟ್ಟರೆ ಜವಾಬ್ದಾರಿ ನಿರ್ವಹಿಸುತ್ತೇನೆ, ಒತ್ತಾಯ ಮಾಡಲ್ಲ ಎಂದು ಹೇಳಿದರು. (ಎನ್.ಬಿ)

Leave a Reply

comments

Related Articles

error: