ಪ್ರಮುಖ ಸುದ್ದಿ

ಬಾಲಿವುಡ್ ನ ಸಿಂಗಮ್ ನಟ ಅಜಯ್ ದೇವಗನ್ ಗೆ ಪಿತೃ ವಿಯೋಗ

ದೇಶ(ನವದೆಹಲಿ)ಮೇ.27:- ಬಾಲಿವುಡ್ ನ ಖ್ಯಾತ ಆ್ಯಕ್ಷನ್ ಡೈರೆಕ್ಟರ್, ಸ್ಟಂಟ್ ಮಾಸ್ಟರ್ ಮತ್ತು ನಟ ಅಜಯ್ ದೇವಗನ್ ಅವರ ತಂದೆ ವೀರೂ ದೇವಗನ್ ಇಂದು ಮುಂಜಾನೆ ಉಸಿರಾಟದ ತೊಂದರೆಯಿಂದಾಗಿ ಇಹಲೋಕ ತ್ಯಜಿಸಿದ್ದಾರೆ.

ಅವರಿಗೆ ಸಾಂತಾಕ್ರೂಜ್ ನ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ. ವೀರೂ ದೇವಗನ್ 80ಕ್ಕೂ ಅಧಿಕ ಚಿತ್ರಗಳಲ್ಲಿ ಆ್ಯಕ್ಷನ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು. ಇದಲ್ಲದೇ 1999ರಲ್ಲಿ ‘ಹಿಂದೂಸ್ಥಾನ್ ಕಿ ಕಸಮ್’ ಚಿತ್ರವನ್ನೂ ನಿರ್ದೇಶಿಸಿದ್ದರು. ‘ದಿಲ್ವಾಲೆ’, ‘ಹಿಮ್ಮತ್ ವಾಲಾ’ ಶಹಂಶಾಹ’ ಚಿತ್ರಗಳು ಖ್ಯಾತಿ ಪಡೆದಿವೆ.

ಅವರು ಅಮೃತಸರದಲ್ಲಿ ಜನ್ಮ ತಳೆದಿದ್ದರು. ಅವರಿಗೆ ಅಜಯ್ ದೇವಗನ್ ಸೇರಿದಂತೆ ನಾಲ್ವರು ಮಕ್ಕಳಿದ್ದಾರೆ. ಕ್ರಾಂತಿ, ಸೌರಭ, ಸಿಂಹಾಸನ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇಂದು ಸಂಜೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.   (ಎಸ್.ಎಚ್)

Leave a Reply

comments

Related Articles

error: