ಪ್ರಮುಖ ಸುದ್ದಿಮೈಸೂರು

ಕಾಳೇಗೌಡ ನಿವಾಸದ ಮೇಲೆ ಎಸಿಬಿ ದಾಳಿ ಅಪಾರ ಪ್ರಮಾಣದ ದಾಖಲಾತಿ ವಶ

ಪಿಡಬ್ಲ್ಯುಡಿ ಸಹಾಯಕ ಅಭಿಯಂತರ ಕಾಳೇಗೌಡ ನಿವಾಸದ  ಮೇಲೆ ಮಂಗಳವಾರ ಬೆಳಿಗ್ಗೆ ಎಸಿಬಿ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಸಂಪಾದಿಸಿಟ್ಟ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಮಂಡ್ಯದಲ್ಲಿ ಸಹಾಯಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಳೇಗೌಡ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂದು ಸಾರ್ವಜನಿಕವಾಗಿ ದೂರು ಬಂದ ಹಿನ್ನೆಲೆಯಲ್ಲಿ ಎಸಿಬಿ ಪೊಲೀಸರು ದಾಳಿ ನಡೆಸಿದರು.

ಸದರ್ನ್ ರೇಂಜ್ ಎಸಿಬಿ ಎಸ್ಪಿ ಕವಿತಾ ಅವರಿಗೆ ದೂರು ಬಂದ ಹಿನ್ನೆಲೆಯಲ್ಲಿ ಮಂಡ್ಯ ನಗರದ ಕಲ್ಲಹಳ್ಳಿ ವಿವಿ ನಗರದ 23ನೇ ಕ್ರಾಸ್ ನಲ್ಲಿರುವ  ಕಾಳೇಗೌಡ ನಿವಾಸಕ್ಕೆ ದಾಳಿ ನಡೆಸಿದ ತಂಡ ಮೈಸೂರು, ಮಂಡ್ಯ, ಮಾರಗೌಡನಹಳ್ಳಿಯ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ. ಮೈಸೂರಿನ ರಾಜಕುಮಾರ್ ರಸ್ತೆಯಲ್ಲಿರುವ  ರವಿಶಂಕರ ಬಡಾವಣೆಯ ಮೇಲೆಯೂ ದಾಳಿ ನಡೆದಿದೆ.

ದಾಳಿಯ ಸಂದರ್ಭ ನಿವಾಸದಲ್ಲಿದ್ದ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, 2000, 500 ಮುಖ ಬೆಲೆಯ ಹೊಸ ನೋಟು, ಕೋಟ್ಯಾಂತರ ರೂ.ಆಸ್ತಿ, ದಾಖಲಾತಿಗಳನ್ನು  ವಶಪಡಿಸಿಕೊಳ್ಳಲಾಗಿದೆ.

ದಾಳಿಯಲ್ಲಿ ಡಿವೈಎಸ್ಪಿ ಶೈಲೇಂದ್ರ, ಸಿಬ್ಬಂದಿಗಳಾದ ಅನಿಲ್, ಪ್ರಶಾಂತ್, ಮಧು ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: