
ಮೈಸೂರು
ಇಂಡಿಯಾ ಟುಡೆ ಅತ್ಯುತ್ತಮ ಕಾಲೇಜು ಸರ್ವೇಕ್ಷಣೆಯಲ್ಲಿ ಸ್ಥಾನ ಪಡೆದ ಎಸ್ ಡಿಎಂ ಮತ್ತು ಎಂ.ಎಂ.ಕೆ ಮಹಿಳಾ ಕಾಲೇಜು
ಮೈಸೂರು,ಮೇ.28:- ಇಂಡಿಯಾ ಟುಡೆ ಅತ್ಯುತ್ತಮ ಕಾಲೇಜು ಸರ್ವೇಕ್ಷಣೆಯಲ್ಲಿ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಎಸ್ ಡಿಎಂ ಮತ್ತು ಎಂ.ಎಂ.ಕೆ ಮಹಿಳಾ ಕಾಲೇಜು ಸ್ಥಾನ ಪಡೆದಿದೆ ಎಂದು ಪ್ರಾಂಶುಪಾಲ ಪ್ರೊ.ಸಾಯಿನಾಥ್ ಮಲ್ಲಿಗೆ ಮಾಡು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು 2018-19ನೇ ಶೈಕ್ಷಣಿಕ ಸಾಲಿನಲ್ಲಿ ದೇಶದ ಪ್ರತಿಷ್ಠಿತ ಇಂಡಿಯಾ ಟುಡೆ ಪತ್ರಿಕೆಯವರು ದೇಶಾದ್ಯಂತ ಪದವಿ ಕಾಲೇಜುಗಳನ್ನು ರಾಷ್ಟ್ರಮಟ್ಟದ ಸರ್ವೇಕ್ಷಣೆಗೆ ಒಳಪಡಿಸಿ ಕಾಲೇಜಿನ ವಿವಿಧ ಕ್ಷೇತ್ರಗಳ ಗುಣಮಟ್ಟದ ಮೂಲಭೂತ ಸೌಲಭ್ಯಗಳನ್ನು ಅಂದಾಜಿಸಿದ್ದಾರೆ. ನಮ್ಮ ಕಾಲೇಜಿನ ಪದವಿ ಕೋರ್ಸ್ ಗಳಿಗೆ ‘ಇಂಡಿಯಾಟುಡೆ ರಾಷ್ಟ್ರೀಯ ಅತ್ಯುತ್ತಮ ಗುಣಾಂಕ ಪಡೆದ ಕಾಲೇಜು’ ಎಂದು ಪರಿಗಣಿಸಿ ಬಿ.ಸಿ.ಎ 75ನೇ ಸ್ಥಾನ, ಬಿ.ಬಿ.ಎ 95ನೇ ಸ್ಥಾನ, ಬಿ.ಎಸ್ಸಿ 103ನೇ ಸ್ಥಾನ, ಬಿಕಾಂ 112ನೇ ಸ್ಥಾನ ಪಡೆದಿದೆ.
ಡಾ.ಡಿ.ವೀರೇಂದ್ರ ಹೆಗ್ಗಡೆಯವರ ದಿವ್ಯ ಮಾರ್ಗದರ್ಶನದಲ್ಲಿ ಶಿಕ್ಷಣದ ಸರ್ವಶ್ರೇಷ್ಠತೆಯನ್ನು ನಿರಂತರವಾಗಿ ಸಾಧಿಸುತ್ತಲಿದ್ದು, ನಮ್ಮ ಕಾಲೇಜಿನ ಬಿ.ಕಾಂ, ಬಿ.ಬಿ.ಎ, ಬಿಎಸ್ಸಿ ಮತ್ತು ಬಿ.ಸಿ.ಎ ಪದವಿ ಕೋರ್ಸ್ ಗಳು ಮೈಸೂರು ವಿವಿಯ ಸಂಯೋಜನೆಗೆ ಒಳಪಟ್ಟಿದೆ ಎಂದು ತಿಳಿಸಿದ್ದಾರೆ. (ಎಸ್.ಎಚ್)