ಪ್ರಮುಖ ಸುದ್ದಿಮೈಸೂರು

ಬೈಕ್-ಕಾರು ಡಿಕ್ಕಿ : ಕಾಲುವೆಗೆ ಉರುಳಿದ ಕಾರು: ಚಾಲಕನ ಸೊಂಟ ಮುರಿತ

ಬೈಕ್ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಉರುಳಿ ಬಿದ್ದ ಪರಿಣಾಮ ಚಾಲಕನ ಸೊಂಟ ಮುರಿತಕ್ಕೊಳಗಾದ ಘಟನೆ  ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆದಿದೆ.
ಕೆ.ಆರ್.ಪೇಟೆ ತಾಲೂಕಿನ ಗಾಂಧಿನಗರದಲ್ಲಿ ಬೈಕ್ ಮತ್ತು ಟ್ರಾಫಿಕ್ ಪಿಎಸ್ಐ ಚಲಿಸುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಕಾರು ಕಾಲುವೆಗೆ ಉರುಳಿ ಬಿದ್ದಿದೆ. ಮದ್ದೂರು ಟ್ರಾಫಿಕ್ ಠಾಣೆಯ ಪಿಎಸ್ಐ ಸವಿತಾ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಯೋಗೇಶ್ ಗೆ ಸೊಂಟ ಮುರಿತಕ್ಕೊಳಗಾಗಿದ್ದಾರೆ , ಪಿಎಸ್ ಐ ಸವಿತಾ ನ್ಯಾಯಾಲಯಕ್ಕೆಂದು ಹಾಸನಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಬೈಕ್ ಚಾಲಕ ಗೋವಿಂದ ಎಂಬವರಿಗೂ  ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಗಾಯಾಳುಗಳಿಗೆ ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: