ಪ್ರಮುಖ ಸುದ್ದಿಮೈಸೂರು

ಮುಕ್ತ ವಿವಿ ಕುಲಪತಿಯಾಗಿ ಪ್ರೊ.ವಿದ್ಯಾಶಂಕರ್ ನೇಮಕ

ಮೈಸೂರು,ಮೇ.29:- ಕರ್ನಾಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನೂತನ ಕುಲಪತಿಯನ್ನಾಗಿ ಬೆಂಗಳೂರು ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಎಸ್.ವಿದ್ಯಾಂಶಂಕರ್ ಅವರನ್ನು ನೇಮಕ ಮಾಡಿ ರಾಜ್ಯಪಾಲ, ಕುಲಾಧಿಪತಿಗಳಾಗಿರುವ  ವಜೂಬಾಯಿ ರೂಢಾಬಾಯಿ ವಾಲಾ ಆದೇಶ ಹೊರಡಿಸಿದ್ದಾರೆ.

ಅವರ ಅಧಿಕಾರಾವಧಿ ಮೂರು ವರ್ಷ. ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರ ವಿಸ್ತರಿತ ಅಧಿಕಾರದ ಅವಧಿ ಇದೇ 31ಕ್ಕೆ ಕೊನೆಗೊಳ್ಳಲಿದೆ. ವಿದ್ಯಾಶಂಕರ್ ಅವರಲ್ಲದೇ ಬೆಂಗಳೂರು ವಿವಿಯ ಪರಿಸರ ವಿಜ್ಞಾನ ವಿಭಾಗದ ಪ್ರೊ.ಕೆ.ಆರ್.ಸೋಮಶೇಖರ್, ಕೆಎಸ್ ಒಯು ಶೈಕ್ಷಣಿಕ ವಿಭಾಗದ ಡೀನ್ ಪ್ರೊ.ಜಗದೀಶ್, ಮೈಸೂರು ವಿವಿ ಅನ್ವಯಿಕ ಸಸ್ಯವಿಜ್ಞಾನ ವಿಭಾಗದ ಪ್ರೊ.ರವಿಶಂಕರ್ ರೈ, ಬೆಂಗಳೂರು ವಿವಿ ಪ್ರಾಣಿ ವಿಜ್ಞಾನ ವಿಭಾಗದ ಪ್ರೊ.ಎಂ ರಾಮಚಂದ್ರ ಅವರ ಹೆಸರನ್ನು ಶೋಧನಾ ಸಮಿತಿ ಶಿಫಾರಸು ಮಾಡಿತ್ತು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: