ಮೈಸೂರು

ಸಹಕಾರ ಇಲಾಖೆಯವರು ಅಪೆಕ್ಸ್ ಬ್ಯಾಂಕ್ ನ್ನು ಸೂಪರ್ ಸಿಡ್ ಮಾಡಲು ಹೊರಟಿರುವುದನ್ನು ಖಂಡಿಸಿ ಪ್ರತಿಭಟನೆ

ಮೈಸೂರು,ಮೇ.29:-  ಸಹಕಾರ ಇಲಾಖೆಯವರು ಅಪೆಕ್ಸ್ ಬ್ಯಾಂಕ್ ನ್ನು ಸೂಪರ್ ಸಿಡ್ ಮಾಡಲು ಹೊರಟಿರುವುದನ್ನು ಖಂಡಿಸಿ ನಾಯಕ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು.

ನಗರದ ನ್ಯಾಯಾಲಯದ ಮುಂದೆ ಇರುವ ಗಾಂಧಿ ಪ್ರತಿಮೆ ಬಳಿ ಇಂದು ಜಮಾಯಿಸಿದ ಪ್ರತಿಭಟನಾಕಾರರು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ತುಮಕೂರಿನ ಕೆ.ಎನ್.ರಾಜಣ್ಣನವರ ಮೇಲಿನ ರಾಜಕೀಯ ದ್ವೇಷದಿಂದ ಬ್ಯಾಂಕ್ ಸೂಪರ್ ಸೀಡ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ನಾಯಕ ಜನಾಂಗದ ಹಿರಿಯರು, ಮಾಜಿ ಶಾಸಕರು ಆದಂತಹ ಕೆ.ಎನ್.ರಾಜಣ್ಣನವರ ತುಮಕೂರು ಜಿಲ್ಲೆಯ ಇತ್ತೀಚಿನ ರಾಜಕೀಯ ಕಾರಣಗಳಿಂದ ಅವರ ವಿರುದ್ಧ ಸಹಕಾರ ಇಲಾಖೆ ವತಿಯಿಂದ ಸೇಡಿನ ಕ್ರಮ ಮಾಡುತ್ತಿರುವುದು ಸರಿಯಲ್ಲ ಎಂದರು.

ಪ್ರತಿಭಟನೆಯಲ್ಲಿ ಮೈಸೂರು ನಾಯಕರ ಪಡೆ ಅಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ, ನಾಯಕರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ಪ್ರಭಾಕರ್, ರಾಜು ಹುಣಸೂರು, ಎಂ.ಶಿವಪ್ರಕಾಶ್, ಡಿ.ಪ್ರಕಾಶ್, ಹದಿನಾರಿನ ಪ್ರಕಾಶ್, ಚಿನ್ನಗಿರಿ ಕೊಪ್ಪಲು ಸಿದ್ದರಾಜು, ಬಸವರಾಜು, ನಾಗವಾಲ ಶಿವು, ಯಡಗೊಳ ರಘು ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: