ದೇಶ

ಹಾಸ್ಟೆಲ್ ನಲ್ಲಿ ಬೆಂಕಿ: 50 ಮಂದಿ ಪ್ರಾಣಾಪಾಯದಿಂದ ಪಾರು

ನವದೆಹಲಿ,ಮೇ 29-ಹುಡುಗಿಯರ ಹಾಸ್ಟೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಹಾಸ್ಟೆಲ್ ನಲ್ಲಿದ್ದ 50 ಮಂದಿ ಪಾರಾಗಿರುವ ಘಟನೆ ಪಶ್ಚಿಮ ದಿಲ್ಲಿಯ ಜನಕಪುರಿ ಮೆಟ್ರೋ ಸ್ಟೇಶನ್‌ ಸಮೀಪ ನಡೆದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಹಾಸ್ಟೆಲ್ ನಲ್ಲಿದ್ದ 50 ಮಂದಿಯನ್ನು ಬೆಂಕಿಯ ಜ್ವಾಲೆಯಿಂದ ರಕ್ಷಿಸಿದ್ದಾರೆ.

ಕಟ್ಟಡದೊಳಗೆ ತುಂಬಿ ಕೊಂಡ ದಟ್ಟ ಹೊಗೆಯಿಂದಾಗಿ ಉಸಿರಾಟದ ತೊಂದರೆಗೆ ಗುರಿಯಾದ ಆರು ಹುಡುಗಿಯರನ್ನು ಸಮೀಪ ಆಸ್ಪತ್ರೆಗೆ ಸೇರಿಸಲಾಗಿದೆ. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಗ್ನಿ ಶಾಮಕ ದಳದ ಮುಖ್ಯ ಅಧಿಕಾರಿ ಅತುಲ್‌ ಗರ್ಗ್‌ ತಿಳಿಸಿದ್ದಾರೆ.

ಹಾಸ್ಟೆಲ್‌ನ ಬೇಸ್‌ಮೆಂಟ್‌ ಎಂಟ್ರಿಯಲ್ಲಿದ್ದ ಇಲೆಕ್ಟ್ರಿಕಲ್‌ ಪ್ಯಾನಲ್‌ ನಲ್ಲಿ ನಸುಕಿನ 3ರ ವೇಳೆಗೆ ಬೆಂಕಿ ಕಾಣಿಸಿಕೊಂಡಿತು. 3.30ರ ಸುಮಾರಿಗೆ ಬೆಂಕಿಯನ್ನು ನಿಯಂತ್ರಿಸಲಾಯಿತು ಎಂದು ಗರ್ಗ್‌ ಹೇಳಿದ್ದಾರೆ.

ಗುಜರಾತ್‌ನ ಸೂರತ್‌ ನಲ್ಲಿ ಕೋಚಿಂಗ್‌ ಕ್ಲಾಸ್‌ ಕಟ್ಟಡದಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ್ದ ಅಗ್ನಿ ದುರಂತಕ್ಕೆ 20 ವಿದ್ಯಾರ್ಥಿನಿಯರು ಬಲಿಯಾದದ್ದನ್ನು ಇಲ್ಲಿ ಸ್ಮರಿಸಬಹುದು. (ಎಂ.ಎನ್)

Leave a Reply

comments

Related Articles

error: