ಪ್ರಮುಖ ಸುದ್ದಿಮೈಸೂರು

ಕ್ಲಿಯರ್ ಮೆಡಿ ರೇಡಿಯಂಟ್ ಅಲ್ಲಿ ಹೆಚ್.ಐ ವಿ ಸೋಂಕಿತ ರೋಗಿಗಳಿಗೆ ಪ್ರತ್ಯೇಕ ಡಯಾಲಿಸಿಸ್ ಕೇಂದ್ರ

ಮೈಸೂರು,ಮೇ.30 : ನಗರದ ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆಯಲ್ಲಿ ಹೆಚ್.ಐ.ವಿ. ಸೋಂಕಿತ ರೋಗಿಗಳಿಗಾಗಿ ಪ್ರತ್ಯೇಕ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ನೆಪ್ರೋ-ಯುರೋಲಾಜಿ ವಿಭಾಗದ ಮುಖ್ಯಸ್ಥರಾದ ಡಾ.ಪಿ.ಶ್ರೀನಿವಾಸ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೆಚ್.ಐ.ವಿ ಸೋಂಕಿತ ಮೂತ್ರಪಿಂಡ ವೈಫಲ್ಯದ ರೋಗಿಗಳು  ಬೆಂಗಳೂರಿಗೆ ಹೋಗಿ ಡಯಾಲಿಸಿಸ್ ಮಾಡಿಸುವಂತಹ ಅನಿವಾರ್ಯವಿತ್ತು, ಇದನ್ನು ಮನಗಂಡ ಸಂಸ್ಥೆಯು ತನ್ನ ಕಟ್ಟಡದಲ್ಲಿಯೇ ಸುಸಜ್ಜಿತವಾದ ನಾಲ್ಕು ಬೆಡ್ ಗಳುಳ್ಳ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಿ ಕಳೆದೊಂದು ತಿಂಗಳಿನಿಂದಲೂ ಕಾರ್ಯ ನಿರ್ವಹಿಸುತ್ತಿದ್ದು, ಇದುವರೆಗೂ ಸುಮಾರು 60ಕ್ಕೂ ಹೆಚ್ಚು ಡಯಾಲಿಸಿಸ್ ಮಾಡಿದ್ದು, ಕೇವಲ 2500 ರೂ.ಗಳ ಶುಲ್ಕವಿರುವುದು ಎಂದು ತಿಳಿಸಿದರು.

ಹೆಚ್.ಐ.ವಿ ರೋಗಿಗಳಿಗೆ ಡಯಾಲಿಸಿಸ್ ಮಾಡುವಾಗ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ಬಗ್ಗೆ ತೀವ್ರ ನಿಗಾವಹಿಸಬೇಕಾಗಿದ್ದು ಇದರಿಂದ ಇವರಿಗಾಗಿಯೇ ಪ್ರತ್ಯೇಕ ಘಟಕವನ್ನು ಆರಂಭಿಸಲಾಗಿದ್ದು, ಚಾಮರಾಜನಗರ, ಪಿರಿಯಾಪಟ್ಟಣ, ಮಂಡ್ಯ, ಹುಣಸೂರು, ಗುಂಡ್ಲುಪೇಟೆ, ಮಡಿಕೇರಿ ಈ ಭಾಗದ ಹೆಚ್ಐವಿ ರೋಗಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಡಾ.ಬಸವರಾಜ್, ಮಂಜುನಾಥ್ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: