ಕ್ರೀಡೆ

ಫ್ರೆಂಚ್‌ ಓಪನ್‌ ಟೆನ್ನಿಸ್‌ ಟೂರ್ನಿ: 3ನೇ ಸುತ್ತಿಗೆ ನಡಾಲ್, ಫೆಡರರ್

ಪ್ಯಾರಿಸ್‌,ಮೇ 30- ಫ್ರೆಂಚ್ಓಪನ್ಟೆನ್ನಿಸ್ಟೂರ್ನಿಯ ಪುರುಷರ ಸಿಂಗಲ್ಸ್ನಲ್ಲಿ ಗ್ರ್ಯಾಂಡ್ಸ್ಲಾಂನ ಹಾಲಿ ಚಾಂಪಿಯನ್ರಾಫೆಲ್ನಡಾಲ್ಹಾಗೂ 20 ಗ್ರ್ಯಾಂಡ್ಸ್ಲಾಂಗಳ ಒಡೆಯ ರೋಜರ್ಫೆಡರರ್ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

2ನೇ ಸುತ್ತಿನ ಪಂದ್ಯದಲ್ಲಿ ದಿಗ್ಗಜ ಆಟಗಾರರಿಬ್ಬರು ಸುಲಭ ಗೆಲುವು ಸಾಧಿಸಿದರು. ಜರ್ಮನಿಯ ಯಾನ್ನಿಕ್ಮಡೆನ್ವಿರುದ್ಧ ನಡಾಲ್‌ 6-1, 6-2, 6-4 ಸೆಟ್ಗಳಲ್ಲಿ ಗೆಲುವು ಸಾಧಿಸಿದರೆ, ಜರ್ಮನಿಯ ಆಸ್ಕರ್ಒಟ್ಟೆ ವಿರುದ್ಧ ಫೆಡರರ್‌ 6-4, 6-3, 6-4 ಸೆಟ್ಗಳಲ್ಲಿ ಜಯಭೇರಿ ಬಾರಿಸಿದರು.

3ನೇ ಸುತ್ತಿನಲ್ಲಿ ನಡಾಲ್ಗೆ 27ನೇ ಶ್ರೇಯಾಂಕಿತ ಆಟಗಾರ ಬೆಲ್ಜಿಯಂನ ಡೇವಿಡ್ಗಾಫಿನ್ಎದುರಾದರೆ, ಫೆಡರರ್ನಾರ್ವೆಯ ಕಾಸ್ಪರ್ರುಡ್ವಿರುದ್ಧ ಸೆಣಸಲಿದ್ದಾರೆ. ಸ್ವಿಜರ್ಲೆಂಡ್ ಸ್ಟಾನಿಸ್ಲಾಸ್ವಾವ್ರಿಂಕಾ, 6ನೇ ಶ್ರೇಯಾಂಕಿತ ಗ್ರೀಸ್ ಸ್ಟೆಫಾನೋ ಟಿಟ್ಸಿಪಾಸ್ಸಹ 3ನೇ ಸುತ್ತಿಗೇರಿದರು.

ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ 2016 ಚಾಂಪಿಯನ್ಸ್ಪೇನ್ ಗಾರ್ಬೈನ್ಮುಗುರುಜಾ, ಸ್ವೀಡನ್ ಲಾರ್ಸನ್ವಿರುದ್ಧ 6-4, 6-1ರಲ್ಲಿ ಗೆದ್ದು 3ನೇ ಸುತ್ತಿಗೆ ಪ್ರವೇಶಿಸಿದರೆ, 7ನೇ ಶ್ರೇಯಾಂಕಿತ ಆಟಗಾರ್ತಿ ಅಮೆರಿಕದ ಸ್ಲೋನ್ಸ್ಟೀಫನ್ಸ್ಸ್ಪೇನ್ ಸೊರಿಬ್ಬೆಸ್ವಿರುದ್ಧ 6-1, 7-6 ಸೆಟ್ಗಳಲ್ಲಿ ಜಯಗಳಿಸಿ ಮುನ್ನಡೆದರು.

ಪುರುಷರ ಡಬಲ್ಸ್ಮೊದಲ ಸುತ್ತಿನಲ್ಲಿ ಭಾರತದ ದಿವಿಜ್ಶರಣ್ಹಾಗೂ ಬ್ರೆಜಿಲ್ ಮಾರ್ಸೆಲೋ ಡೆಮೊಲೈನರ್ಜೋಡಿ ಸ್ವೀಡನ್ ರಾಬರ್ಟ್ಹಾಗೂ ಹಂಗೇರಿಯ ಫುಕ್ಸೊವಿಕ್ಸ್ವಿರುದ್ಧ 6-4, 4-6, 6-2 ಸೆಟ್ಗಳಲ್ಲಿ ಗೆದ್ದು 2ನೇ ಸುತ್ತಿಗೆ ಪ್ರವೇಶ ಪಡೆಯಿತು. (ಎಂ.ಎನ್)

Leave a Reply

comments

Related Articles

error: