ಪ್ರಮುಖ ಸುದ್ದಿಮೈಸೂರು

ಪ್ರಧಾನಿಯಾಗಿ ಇಂದು ಅಧಿಕಾರ ಸ್ವೀಕರಿಸುವ ನರೇಂದ್ರ ಮೋದಿ ಅವರಿಗೆ ಶುಭಹಾರೈಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್

ಮೈಸೂರು,ಮೇ.30:-  ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಪ್ರಧಾನಿಯಾಗಿ  ಇಂದು ಅಧಿಕಾರ ಸ್ವೀಕರಿಸುತ್ತಿದ್ದು, ನರೇಂದ್ರ ಮೋದಿ ಅವರಿಗೆ  ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಶುಭಹಾರೈಸಿದ್ದಾರೆ.

ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ನರೇಂದ್ರ ಮೋದಿ ಅವರಿಗೆ ಹೆಚ್.ವಿಶ್ವನಾಥ್  ಟ್ವೀಟರ್ ನಲ್ಲಿ ಶುಭಕೋರಿದ್ದಾರೆ.   ಭಾರತದ ಎಲ್ಲಾ ಜಾತಿ ಜನಾಂಗ ಧರ್ಮ ಭಾಷೀಕರಣ ಆಶಯಗಳಂತೆ ಒಂದಾಗಿ ಎಲ್ಲರ ಭವಿಷ್ಯದ ಬಲ ಭೀಮನಾಗಿ ಮೋದಿ ಹೆಜ್ಜೆ ಹಾಕಲಿ.

ಜಾಗತಿಕ ಜಗತ್ತಿನ ಅತ್ಯಂತ ಎತ್ತರದ ಜನತಂತ್ರ ವ್ಯವಸ್ಥೆಯನ್ನು ಒಪ್ಪಿ ಅಪ್ಪಿ ಆಡಳಿತ   ನಡಿಸುತ್ತಿರುವ 71 ವರ್ಷಗಳ ಕಾಲದಿಂದ ಸ್ವತಂತ್ರ ಸಂರಕ್ಷಿಸಿ ಮುನ್ನುಗ್ಗುತ್ತಿರೋ ಭಾರತದ ಪ್ರಧಾನಮಂತ್ರಿಯಾಗಿ 2 ನೇ ಬಾರಿ ಅಧಿಕಾರ ಸ್ವೀಕರಿಸುತ್ತಿರುವ ನಿಮಗೆ ಭಾರತದ ಸಮಸ್ತ ಜನ ಕೋಟಿಯ ಜನರ ಶುಭಕಾಮನೆಗಳು ಎಂದು ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

ಇಂದು ಸಂಜೆ 7ಗಂಟೆಗೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು ಇವರ ಜತೆ ಸಚಿವರು ಸಹ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: