ಮೈಸೂರು

ಜೂ.2ರಂದು ಪಂ. ಹಡಪದ ಪ್ರಶಸ್ತಿ ಪ್ರದಾನ ಸಮಾರಂಭ : ಸಂಗೀತ ಕಛೇರಿ

ಮೈಸೂರು,ಮೇ.30 : ಗುರುಪುಟ್ಟರಾಜ ಸಂಗೀತ ಸಭಾ ವತಿಯಿಂದ  ದಿ.ಪಂಡಿತ್ ಕೆ.ಎಸ್.ಹಡಪದ ಅವರ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪುರಸ್ಕಾರವನ್ನು ಏರ್ಪಡಿಸಲಾಗಿದೆ.

ಜೂ.2ರ ಸಂಜೆ 5.30ಕ್ಕೆ ನಾದಬ್ರಹ್ಮ ಸಂಗೀತ ಸಭಾದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಹಿರಿಯ ಸಂಗೀತಗಾರ ಪಂ.ಇಂದೂಧರ ನಿರೋಡಿ ಉದ್ಘಾಟಿಸುವರು, ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ನರರೋಗತಜ್ಞ ಡಾ.ಎಮ್.ಎಸ್.ಭಾಸ್ಕರ್, ಅಬಕಾರಿ ಇಲಾಖೆ ರಕ್ಷಕರಾದ ಮುರುಗೇಂದ್ರ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಹುಮನಬಾದಿನ ಪಂಡಿತ್ ಮಡಿವಾಳಯ್ಯ ಸಾಲಿ ಇವರಿಗೆ ಪ್ರಸಕ್ತ ಸಾಲಿನ ಪಂ.ಕೆ.ಎಸ್.ಹಡಪದ ಪ್ರಶಸ್ತಿ ನೀಡಿ ಪುರಸ್ಕಾರಿಸಲಾಗುವುದು. ನಂತರ ಸಂಗೀತ ಕಛೇರಿ ನಡೆಯಲಿದೆ. (ಕೆ.ಎಂ.ಆರ್)

Leave a Reply

comments

Related Articles

error: