ಕ್ರೀಡೆಮೈಸೂರು

ರಾಮ್ ಬ್ಯಾಡ್‍ಮಿಂಟನ್ ಅಕಾಡೆಮಿಯ ಕ್ರೀಡಾಪಟುಗಳಿಗೆ ಪ್ರಶಸ್ತಿ

ಮೈಸೂರು,ಮೇ.30:- ಮೈಸೂರಿನ ಆದಿತ್ಯ ಸ್ಪೋರ್ಟ್ಸ್ ಅರೆನಾದ ರಾಮ್ ಬ್ಯಾಡ್‍ಮಿಂಟನ್ ಅಕಾಡೆಮಿಯ ಕ್ರೀಡಾಪಟುಗಳಾದ ಕಿಷಲ್ ಗಣಪತಿ ಹಾಗೂ ಜಯಂತ್ ಜಿ. ಯು ಯುನೆಕ್ಸ್ ಸನ್‍ ರೈಸ್ – ಯಾದವ್ ಪ್ರೊ ಬ್ಯಾಡ್‍ಮಿಂಟನ್ ಅಕಾಡೆಮಿ ಸ್ಟೇಟ್ ರ್ಯಾಂಕಿಂಗ್ ಟೂರ್ನಮೆಂಟ್‍ನ ಹದಿನೇಳು ವರ್ಷದ ಒಳಗಿನ  ಬಾಲಕರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದ್ದಾರೆ.

ಇತ್ತೀಚೆಗೆ  ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಸ್ಕೈಫಿಂಚ್ ಸ್ಪೋರ್ಟ್ಸ್  ಸೆಂಟರ್‍ನಲ್ಲಿ ನಡೆದ  ಯುನೆಕ್ಸ್ ಸನ್‍ ರೈಸ್ – ಯಾದವ್ ಪ್ರೊ ಬ್ಯಾಡ್‍ಮಿಂಟನ್ ಅಕಾಡೆಮಿ ಸ್ಟೇಟ್ ರ್ಯಾಂಕಿಂಗ್  ಟೂರ್ನಮೆಂಟ್‍ನ ಹದಿನೇಳು ವರ್ಷದ ಒಳಗಿನ  ಬಾಲಕರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿರುತ್ತಾರೆ. ಇವರು ಮೈಸೂರಿನ ರಾಮ್‍ ಬ್ಯಾಡ್‍ಮಿಂಟನ್ ಅಕಾಡೆಮಿಯಲ್ಲಿ ನುರಿತ ತರಬೇತುದಾರರಾದ ರಾಮೇಶ್ವರ್ ಮಹಾಪಾತ್ರ ಹಾಗೂ ರಾಮಕೃಷ್ಣ ರವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ಪ್ರಸ್ತುತ ಕಿಷಲ್ ಗಣಪತಿ ಹಾಗೂ ಜಯಂತ್ ಜಿ. ಇಬ್ಬರೂ ಹದಿನೇಳು ವರ್ಷದ ಒಳಗಿನ ಬಾಲಕರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ಸೀಡ್ ನಂ.1 ಆಟಗಾರರಾಗಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: