ಸುದ್ದಿ ಸಂಕ್ಷಿಪ್ತ

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಹಾಸನ (ಮೇ 30): ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಬೇಲೂರು ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಲಕ್ಕುಂದ ಗ್ರಾ.ಪಂ ಅಂಕಿಹಳ್ಳಿ ಪೇಟೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆ ಮೀಸಲಾತಿ ಇತರೆ.

ಕೆಸಗೋಡು ಗ್ರಾ.ಪಂ ಕೆಸಗೋಡು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆ ಮೀಸಲಾತಿ ಎಸ್.ಸಿ, ಅನುಘಟ್ಟ ಗ್ರಾ.ಪಂ ಅನುಘಟ್ಟ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆ ಮೀಸಲಾತಿ ಇತರ.

ಗೋಣಿಸೋಮನಹಳ್ಳಿ ಗ್ರಾ.ಪಂ ಗೋಣಿಸೋಮನಹಳ್ಳಿ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆ ಮೀಸಲಾತಿ ಇತರ, ಮದಘಟ್ಟ ಗ್ರಾ.ಪಂ ಚಂದನಹಳ್ಳಿ ಬಾರೆ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆ ಮೀಸಲಾತಿ ಇತರ.

ಪುರಸಭೆ ವ್ಯಾಪ್ತಿಯ ಲಕ್ಷ್ಮೀಪುರ ಬಡಾವಣೆ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆ ಮೀಸಲಾತಿ ಇತರ, ಸನ್ಯಾಸಿಹಳ್ಳಿ ಗ್ರಾ.ಪಂ. ಬಿಟ್ರುವಳ್ಳಿ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆ ಮೀಸಲಾತಿ ಇತರೆ.

ಒಟ್ಟು 02 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆ ಹುದ್ದೆ ಮತ್ತು 05 ಅಂಗನವಾಡಿ ಕೇಂದ್ರಗಳ ಸಹಾಯಕಿ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26/06/2019 ರಂದು ಕೊನೆಯ ದಿನವಾಗಿರುತ್ತದೆ. ಸ್ಥಳೀಯರಿಗೆ ಮಾತ್ರ ಆದ್ಯತೆ ಇರುತ್ತದೆ. ಹೆಚ್ಚಿನ ವಿವರಗಳಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ : 08177-222269.

(ಎನ್.ಬಿ)

Leave a Reply

comments

Related Articles

error: