ಮೈಸೂರು

ಕಿಷಲ್ ಗಣಪತಿ-ಜಯಂತ್ ಗೆ ಬ್ಯಾಡ್ಮಿಂಟನ್ ಪ್ರಶಸ್ತಿ

ಮೈಸೂರು,ಮೇ.30 : ಆದಿತ್ಯ ಸ್ಪೋರ್ಟ್ ಅರೆನಾದ ರಾಮ್ ಬ್ಯಾಡ್ ಮೆಂಟನ್ ಅಕಾಡೆಮಿಯ ಕ್ರೀಡಾಪಟುಗಳು ಈಚೆಗೆ ಬೆಂಗಳೂರಿನಲ್ಲಿ ನಡೆದ  ಸ್ಟೇಟ್ ರ್ಯಾಂಕಿಂಗ್ ಟೂರ್ನಮೆಂಟ್ ನಲ್ಲಿ ಹದಿನೇಳು ವರ್ಷದೊಳಗಿನ ಬಾಲಕರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ಬೆಂಗಳೂರಿನ ಜೆಪಿ ನಗರದಲ್ಲಿರುವ ಸ್ಕೈಫಿಂಚ್ ಸ್ಪೋರ್ಟ್ಸ್ ಸೆಂಟರ್ ನಲ್ಲಿ ಕಳೆದ ದಿ.15 ರಿಂದ 20ರವರೆಗೆ ನಡೆದ ಪಂದ್ಯಾವಳಿಯಲ್ಲಿ ಕಿಷಲ್ ಗಣಪತಿ, ಜಿ.ಯು ಜಯಂತ್ ಇವರುಗಳು ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಯಾದವ್ ಪ್ರೊ ಬ್ಯಾಡ್ ಮಿಂಟನ್ ಅಕಾಡೆಮಿ ಸ್ಟೇಟ್ ರ್ಯಾಂಕಿಂಗ್ ಟೂರ್ನಮೆಂಟ್ ಆಗಿತ್ತೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.  (ಕೆ.ಎಂ.ಆರ್)

Leave a Reply

comments

Related Articles

error: