ಮೈಸೂರು

ರಂಗ ಸಹೋದರರಿಗೆ ಪ್ರಶಸ್ತಿಯ ಗರಿ : ಮ್ಯಾಚಿನಿಸ್ಟ್ ಸೂಪರ್ ನೆಕ್ಸ್ಟ್ ಜನರೇಶನ್ ಅವಾರ್ಡ್ಗೆ ಎನ್ಆರ್ ಸಮೂಹ ಭಾಜನ

ಮೈಸೂರು, ಮೇ 31:- ಸಣ್ಣ ಮಟ್ಟದ ಗೃಹ ಕೈಗಾರಿಕೆಯಾಗಿ ಆರಂಭವಾಗಿ, ಬೃಹತ್ ಪ್ರಮಾಣದ ಅಂತರ ರಾಷ್ಟ್ರೀಯ ಉದ್ಯಮದವರೆಗೆ ಬೆಳೆದು ಬಂದು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಮೈಸೂರು ಮೂಲದ ಎನ್‍ಆರ್ ಸಮೂಹದ ರಂಗಕುಟುಂಬಕ್ಕೆ ‘ದಿ ಮ್ಯಾಚಿನಿಸ್ಟ್ ಸೂಪರ್  ನೆಕ್ಸ್ಟ್ ಜನರೇಶನ್ ಅವಾರ್ಡ್ – ಕುಟುಂಬ ವ್ಯವಹಾರ ವಿಭಾಗ’ ಪ್ರಶಸ್ತಿ ಸಂದಿದೆ.

ಮ್ಯಾಚಿನಿಸ್ಟ್ ನಿಯತಕಾಲಿಕೆ (ಟೈಮ್ಸ್  ಆಫ್‍ಇಂಡಿಯಾ ಗುಂಪಿನ) ತಯಾರಿಕಾ ವಲಯಕ್ಕೆ ಸಂಬಂಧಿಸಿದ ಭಾರತದ ಪ್ರೀಮಿಯಂ 2  ಪತ್ರಿಕೆಯಾಗಿದೆ. ಸಾಧಕ ಉತ್ಪಾದನಾ ಉದ್ಯಮಗಳಿಗೆ ನೀಡಲಾಗುವ ಮೊದಲ ಮತ್ತು ಏಕೈಕ ರೆಡ್‍ ಕಾರ್ಪೆಟ್ ಪ್ರಶಸ್ತಿ ಇದಾಗಿದೆ. ಎನ್‍ಆರ್ ಸಮೂಹದ 71 ವರ್ಷದ ಸಾಧನೆಯ ವೃತ್ತಾಂತ, ಕಥೆ ಮತ್ತು ವೈವಿಧ್ಯತೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ಸಮೂಹ ರೂಪುಗೊಂಡ ಆರಂಭದಿಂದಲೂರಂಗ ಸಹೋದರರುಅತ್ಯುತ್ತಮ ಸಾಧನೆ ಪ್ರದರ್ಶಿಸಿದ್ದಾರೆ. ಸೈಕಲ್ ಪ್ಯೂರ್‍ಅಗರಬತ್ತೀಸ್‍ನ ವ್ಯವಸ್ಥಾಪಕ ನಿರ್ದೇಶಕ   ಅರ್ಜುನ್‍ರಂಗ  ಮೇ 29ರಂದು ಬೆಂಗಳೂರಿನ ಎಂ.ಜಿ.ರಸ್ತೆಯ ತಾಜ್ ಹೋಟೆಲ್‍ನಲ್ಲಿ ರಂಗ ಸಹೋದರರ ಪರವಾಗಿ “ದಿ ಮ್ಯಾಚಿನಿಸ್ಟ್ ಸೂಪರ್  ನೆಕ್ಸ್ಟ್ ಜನರೇಶನ್ ಅವಾರ್ಡ್ಸ್” ಪ್ರಶಸ್ತಿಯನ್ನು ಸ್ವೀಕರಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ  ಸೈಕಲ್ ಪ್ಯೂರ್‍ಅಗರಬತ್ತೀಸ್‍ನ ವ್ಯವಸ್ಥಾಪಕ ನಿರ್ದೇಶಕ   ಅರ್ಜುನ್‍ರಂಗ, “ಈ ಪ್ರಶಸ್ತಿ ಎನ್‍ಆರ್ ಸಮೂಹದ ನಿರಂತರ ಬೆಳವಣಿಗೆಗೆ ಮತ್ತು ವರ್ಷಗಳಿಂದ ನಾವು ವೈವಿಧ್ಯಮಯವಾದ ಕ್ಷೇತ್ರಗಳಲ್ಲಿ ನಮ್ಮ ಬಲವಾದ ಹೆಜ್ಜೆ ಗುರುತನ್ನು ಮೂಡಿಸುತ್ತ ಬಂದಿದ್ದಕ್ಕೆ ಸಾಕ್ಷಿಯಾಗಿದೆ. ಈ ಯಶಸ್ಸನ್ನು ಸಾಧಿಸಲು ಸಹಾಯ ಮಾಡಿದ ಎನ್‍ಆರ್ ಗುಂಪಿನಲ್ಲಿ ಪ್ರತಿಯೊಬ್ಬ ಉದ್ಯೋಗಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸಲು ಬಯಸುತ್ತೇನೆ. ಅವರ ಶ್ರಮ ಸಹಕಾರ ಇಲ್ಲದೆ ಇಂತಹ ಸಾಧನೆ ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದರು.  (ಎಸ್.ಎಚ್)

Leave a Reply

comments

Related Articles

error: