ಮೈಸೂರು

ಸಮಾಜವನ್ನು ಕುಟುಂಬವಾಗಿ ಪರಿವರ್ತಿಸುವಲ್ಲಿ ಕಲೆಯ ಪಾತ್ರ ಮಹತ್ವದ್ದು : ಜಯಂತ್ ಕಾಯ್ಕಿಣಿ

ಸಮಾಜವನ್ನು ಕುಟುಂಬವಾಗಿ ಪರಿವರ್ತಿಸುವಲ್ಲಿ ಕಲೆಯು ಮಹತ್ವದ ಪಾತ್ರ ವಹಿಸುತ್ತದೆ ಎಂದು ಕವಿ, ಸಾಹಿತಿ  ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟರು.

ಮೈಸೂರಿನ ರಂಗಾಯಣದ ವನರಂಗದಲ್ಲಿ ನಿರಂತರ ಫೌಂಡೇಷನ್ ವತಿಯಿಂದ ಏರ್ಪಡಿಸಲಾದ  ನಿರಂತರ ರಂಗ ಉತ್ಸವವನ್ನು  ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಲೆ ಜನರ ತುಡಿತವನ್ನು ಹಿಡಿಯಲು ಪ್ರಯತ್ನಿಸುತ್ತದೆ. ಕಲೆಗೆ ಜನರನ್ನು ಒಗ್ಗೂಡಿಸುವ ಶಕ್ತಿಯಿದೆ. ನಾಟಕ, ಸಿನಿಮಾಮ ಜಾತ್ರೆ ಮೊದಲಾದ ಎಲ್ಲ ಪ್ರದರ್ಶಕ ಕಲೆಗಳು ಜನರನ್ನು ಒಗ್ಗೂಡಿಸುತ್ತದೆ ಎಂದರು.

ನಮ್ಮನ್ನು ಅಹಂಕಾರಿಗಳನ್ನಾಗಿಸುವುದು ಜ್ಞಾನವಾಗಲು ಸಾಧ್ಯವಿಲ್ಲ. ಶಿಕ್ಷಣವೇ ಧರ್ಮ. ಸಮಾನತೆಯೇ ಆಧ್ಯಾತ್ಮ. ಫೇಸ್ ಬುಕ್, ವ್ಯಾಟ್ಸಾಪ್ ಗುಂಗಿನಲ್ಲಿ ಆಧುನಿಕ ಭರಾಟೆಯಲ್ಲಿ ಕಲೆಗಳನ್ನು ಮರೆಯಬಾರದು. ಒಗ್ಗೂಡಿ ಸಾಗುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ರಂಗಕರ್ಮಿ ಚಿದಂಬರ ರಾವ್  ಜಂಬೆ ಮಾತನಾಡಿ ಕಿರುರಂಗಮಂದಿರ ಇನ್ನೂ ಕಿರಿದಾಗಿಯೇ ಇರುವುದು ಬೇಸರದ ಸಂಗತಿ. ಅದರ ವಿಸ್ತರಣೆಗೆ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದರು.

ನಿರಂತರ ರಂಗ ಉತ್ಸವದ   ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಧಾರವಾಡದ ಆಟಮಾಟ ತಂಡದವರು ಚಿದಾನಂದ ಸಾಲಿ ರಚಿತ ಮಹಾದೇವ ಹಡಪದ ನಿರ್ದೇಶನದ ಬಾರಿಗಿಡ ನಾಟಕ ಪ್ರದರ್ಶಿಸಿದರು.

Leave a Reply

comments

Related Articles

error: