ದೇಶಪ್ರಮುಖ ಸುದ್ದಿ

ಮೋದಿ ಮಂತ್ರಿಮಂಡಲ 2.0 : ಹೀಗಿದೆ ಪ್ರಮಾಣ ವಚನ ಸ್ವೀಕರಿಸಿದ 58 ಸಂಪುಟ ಸದಸ್ಯರ ಪಟ್ಟಿ

ನವದೆಹಲಿ (ಮೇ 30): ನರೇಂದ್ರ ಮೋದಿ ನೇತೃತ್ವದ ಎನ್​ಡಿಎ-2 ಸರ್ಕಾರ ಇವತ್ತಿನಿಂದ ಅಸ್ತಿತ್ವಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ 57 ಸಹೋದ್ಯೋಗಿಗಳು ಇವತ್ತು ರಾಷ್ಟ್ರಪತಿಗಳಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ನೂತನ ಸರ್ಕಾರದಲ್ಲಿ ಪ್ರಧಾನಿ ಸೇರಿ 25 ಸಂಪುಟ ದರ್ಜೆ ಸಚಿವರಿದ್ದಾರೆ. ಸ್ವತಂತ್ರ ದರ್ಜೆ ರಾಜ್ಯ ಖಾತೆ ಸಚಿವರು 9 ಹಾಗೂ ರಾಜ್ಯ ದರ್ಜೆ ಸಚಿವರು 24 ಮಂದಿ ಇದ್ದಾರೆ. ಪ್ರಧಾನಿ ಸೇರಿದಂತೆ ಉತ್ತರ ಪ್ರದೇಶದಿಂದ 9 ಜನರು ಸಂಪುಟಕ್ಕೆ ಸೇರ್ಪಡೆಯಾಗಿದ್ಧಾರೆ. ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಸೇರಿದಂತೆ ನಾಲ್ವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಇವರ ಪೈಕಿ ಸುರೇಶ್ ಅಂಗಡಿಗೆ ಮಾತ್ರ ರಾಜ್ಯ ದರ್ಜೆ ಸ್ಥಾನ ಸಿಕ್ಕಿದೆ. ನಿರ್ಮಲಾ ಸೀತಾರಾಮನ್, ಡಿ.ವಿ. ಸದಾನಂದ ಗೌಡ ಮತ್ತು ಪ್ರಹ್ಲಾದ್ ಜೋಷಿ ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಲಿದ್ದಾರೆ.

ಇನ್ನು, ಬಿಜೆಪಿಯು ತನ್ನ ಮಿತ್ರಪಕ್ಷಗಳಿಗೆ ಸಂಪುಟದಲ್ಲಿ ತಲಾ ಒಂದೊಂದು ಸ್ಥಾನ ನೀಡಲು ನಿರ್ಧರಿಸಿದೆ. ಇದು ಜೆಡಿಯು ಪಕ್ಷಕ್ಕೆ ಅಸಮಾಧಾನ ತಂದಿದ್ದು, ಸರಕಾರದಿಂದ ದೂರ ಉಳಿಯಲು ನಿರ್ಧರಿಸಿದೆ. 16 ಸ್ಥಾನಗಳನ್ನ ಗೆದ್ದಿದ್ದ ಜೆಡಿಯು ಹೆಚ್ಚಿನ ಸ್ಥಾನ ನಿರೀಕ್ಷಿಸಿತ್ತು. ಸರಕಾರದಿಂದ ಹೊರಗುಳಿದರೂ ಎನ್​ಡಿಎ ಮೈತ್ರಿಕೂಟದಲ್ಲೇ ಜೆಡಿಯು ಮುಂದುವರಿಯಲಿದೆ. ಶಿವಸೇನೆ ಕೂಡ ಒಂದು ಸ್ಥಾನಕ್ಕೆ ತೃಪ್ತಿ ಪಡುವ ಸಾಧ್ಯತೆ ಇಲ್ಲ.

ಪ್ರಧಾನಿ ನರೇಂದ್ರ ಮೋದಿಯವರ ಎನ್​ಡಿಎ-2.0 ಸರ್ಕಾರದ ಟೀಮ್ ಹೀಗಿದೆ:

ಸಂಪುಟ ದರ್ಜೆ ಸಚಿವರು:
1) ರಾಜನಾಥ್ ಸಿಂಗ್
2) ಅಮಿತ್ ಶಾ
3) ನಿತಿನ್ ಗಡ್ಕರಿ
4) ಡಿವಿ ಸದಾನಂದ ಗೌಡ
5) ನಿರ್ಮಲಾ ಸೀತಾರಾಮನ್
6) ರಾಮ್​ವಿಲಾಸ್ ಪಾಸ್ವಾನ್
7) ನರೇಂದ್ರ ಸಿಂಗ್ ತೋಮರ್
8) ರವಿಶಂಕರ್ ಪ್ರಸಾದ್.
9) ಹರ್​ಸಿಮ್ರತ್ ಕೌರ್
10) ತಾವರ್ ಚಂದ್ ಗೆಹ್ಲೋಟ್
11) ಸುಬ್ರಮಣಿಯಮ್ ಜೈಶಂಕರ್
12) ಡಾ. ರಮೇಶ್ ಪೋಖ್ರಿಯಾಲ್
13) ಅರ್ಜುನ್ ಮುಂಡಾ
14) ಸ್ಮೃತಿ ಇರಾನಿ
15) ಡಾ. ಹರ್ಷವರ್ಧನ್
16) ಪ್ರಕಾಶ್ ಜಾವಡೇಕರ್
17) ಪಿಯುಶ್ ಗೋಯೆಲ್
18) ಧರ್ಮೇಂದ್ರ ಪ್ರಧಾನ್
19) ಮುಖ್ತಾರ್ ಅಬ್ಬಾಸ್ ನಖ್ವಿ
20) ಪ್ರಹ್ಲಾದ್ ಜೋಷಿ
21) ಡಾ. ಮಹೇಂದ್ರನಾಥ್ ಪಾಂಡೆ
22) ಅರವಿಂದ್ ಸಾವಂತ್
23) ಗಿರಿರಾಜ್ ಸಿಂಗ್
24) ಗಜೇಂದ್ರ ಸಿಂಗ್ ಶೆಖಾವತ್

ಸ್ವತಂತ್ರ ದರ್ಜೆ ರಾಜ್ಯ ಖಾತೆ:
1) ಸಂತೋಷ್ ಸಿಂಗ್ ಗಂಗ್ವಾರ್
2) ಇಂದ್ರಜಿತ್ ಸಿಂಗ್
3) ಶ್ರೀಪಾದ್ ಯಶೋನಾಯಕ್
4) ಡಾ. ಜಿತೇಂದ್ರ ಸಿಂಗ್
5) ಕಿರಣ್ ರಿಜಿಜು
6) ಪ್ರಹ್ಲಾದ್ ಸಿಂಗ್ ಪಟೇಲ್
7) ರಾಜಕುಮಾರ್ ಸಿಂಗ್
8) ಹರದೀಪ್ ಸಿಂಗ್ ಪುರಿ
9) ಮನ್​ಸುಖ್ ಮಾಂಡವಿಯ

ರಾಜ್ಯ ಖಾತೆ ಸಚಿವರು:
1) ಫಗ್ಗನ್ ಸಿಂಗ್ ಕುಲಸ್ತೆ
2) ಅಶ್ವಿನ್ ಕುಮಾರ್ ಚೌಬೆ
3) ಅರ್ಜುನ್ ಸಿಂಗ್ ಮೇಘವಾಲ್
4) ಜನರಲ್ ವಿ.ಕೆ. ಸಿಂಗ್
5) ಕೃಷ್ಣಪಾಲ್ ಗುರ್ಜರ್
6) ರಾವ್ ಸಾಹೇಬ್ ದಾನ್ವೆ
7) ಗಂಗಾಪುರಂ ಕಿಶನ್ ರೆಡ್ಡಿ
8) ಪುರುಷೋತ್ತಮ್ ರೂಪಾಲ
9) ರಾಮದಾಸ್ ಅಥೋಳೆ
10) ಸಾಧ್ವಿ ನಿರಂಜನ್ ಜ್ಯೋತಿ
11) ಬಾಬುಲ್ ಸುಪ್ರಿಯೋ
12) ಸಂಜೀವ್ ಕುಮಾರ್ ಬಾಲಿಯಾನ್
13) ಧೋತ್ರೆ ಸಂಜಯ್ ಶ್ಯಾಮರಾವ್
14) ಅನುರಾಗ್ ಠಾಕೂರ್
15) ಸುರೇಶ್ ಅಂಗಡಿ
16) ನಿತ್ಯಾನಂದ್ ರಾಯ್
17) ರತನ್​ಲಾಲ್ ಕಟಾರಿಯಾ
18) ವಿ. ಮುರಳೀಧರನ್
19) ರೇಣುಕಾ ಸಿಂಗ್ ಸರೂಟ
20) ಸೋಮಪ್ರಕಾಶ್
21) ರಾಮೇಶ್ವರ್ ತೇಲಿ
22) ಪ್ರತಾಪ್ ಚಂದ್ರ ಸಾರಂಗಿ
23) ಕೈಲಾಶ್ ಚೌಧರಿ ಅವರಿಂದ ಪ್ರಮಾಣವಚನ ಸ್ವೀಕಾರ
24) ದೇಬೋಶ್ರೀ ಚೌಧರಿ

(ಎನ್.ಬಿ)

Leave a Reply

comments

Related Articles

error: