ಮೈಸೂರು

ನೀರಿನ ಕರ ಮನ್ನಾ ಮಾಡಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂ. 12ರ ನಾಚನಹಳ್ಳಿ ಪಾಳ್ಯದ ನಿವಾಸಿಗಳ ಸಾವಿರಾರು ರೂಪಾಯಿಗಳ ನೀರಿನ ಕರವನ್ನು ಮನ್ನಾ ಮಾಡಿ ಎಂದು ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮೈಸೂರಿನ ನೀರು ಸರಬರಾಜನ್ನು ಜಸ್ಕೋ ಕಂಪನಿಗೆ ವಹಿಸಿದ ನಂತರ 2012ರಲ್ಲಿ ಎಲ್ಲ ಮನೆಗಳಿಗೆ ನೀರಿನ ಸಂಪರ್ಕ ಮತ್ತು ಮೀಟರ್ ಅಳವಡಿಸಲಾಗಿದೆ. ಹಿಂದೆ ನೀರಿನ ಬಿಲ್ಲನ್ನು ಪ್ರತಿ ತಿಂಗಳು ನೀಡುತ್ತಿರಲಿಲ್ಲ. ಇದೀಗ ಏಳೆಂಟು ವರ್ಷಗಳ ಬಾಕಿ ಮತ್ತು ಬಡ್ಡಿಯನ್ನು ಸೇರಿಸಿ ಸಾವಿರಾರು ರೂಪಾಯಿಗಳ ಬಿಲ್ಲನ್ನು ನೀಡಲಾಗಿದೆ. ನಾಚನಹಳ್ಳಿ ಪಾಳ್ಯದಲ್ಲಿ ಒಳಚರಂಡಿ ವ್ಯವಸ್ಥೆಯೇ ಇಲ್ಲದಿದ್ದರೂ ಒಳಚರಂಡಿ ಶುಲ್ಕ ವಿಧಿಸಲಾಗಿದೆ. ಕೆಲವು ಕುಟುಂಬಗಳಿಗೆ ನಲ್ವತ್ತು-ಐವತ್ತು ಸಾವಿರಗಳನ್ನು ಕರವಾಗಿ ವಿಧಿಸಲಾಗಿದೆ. ಈ ಕರವನ್ನು ಭರಿಸದಿದ್ದರೆ ನಗರಪಾಲಿಕೆ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಹೇಳಿದ್ದು ಆತಂಕಕ್ಕೆಡೆ ಮಾಡಿದೆ. ಆದ್ದರಿಂದ ನಾಚನಹಳ್ಳಿ ಪಾಳ್ಯದ ನಿವಾಸಿಗಳ ಸಾವಿರಾರು ರೂಪಾಯಿಗಳ ನೀರಿನ ಕರವನ್ನು ಮನ್ನಾ ಮಾಡಬೇಕು. ಬಡವರು ಮತ್ತು ಕೊಳೆಗೇರಿ ನಿವಾಸಿಗಳಿಗೆ ಕನಿಷ್ಠ ಜೀವಜಲವನ್ನು ಉಚಿತವಾಗಿ ನೀಡಬೇಕು ಎಂದು ಒತ್ತಾಯಿಸಿದರು.  ಎಂದರು.

ದುಬಾರಿ ನೀರಿನ ಬಿಲ್ಲನ್ನು ಮನ್ನಾ ಮಾಡಿ, ನೀರು ಸರಕಲ್ಲ, ನಮ್ಮ ಹಕ್ಕು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಸದಸ್ಯರಾದ ಚಂದ್ರಶೇಖರ್, ಸಂಧ್ಯಾ ಪಿ.ಎಸ್, ಯಶೋಧರ್, ಸೀಮಾ ಜಿ.ಎಸ್, ಸುನಿಲ್ ಟಿ.ಆರ್, ಬಸವರಾಜು, ಸುಮಾ, ಆಸಿಯಾಬೇಗಂ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply

comments

Related Articles

error: