ಪ್ರಮುಖ ಸುದ್ದಿ

ಪಕ್ಷೇತರ ಅಭ್ಯರ್ಥಿ ಶಾಮಿಯಾನ ತಿಮ್ಮೇಗೌಡ ಶಾಸಕ ನಾರಾಯಣಗೌಡ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆ

ರಾಜ್ಯ(ಮಂಡ್ಯ)ಜೂ.1:- ಕೆ.ಆರ್.ಪೇಟೆ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿದ ಪಕ್ಷೇತರ ಅಭ್ಯರ್ಥಿ ಶಾಮಿಯಾನ ತಿಮ್ಮೇಗೌಡ ಶಾಸಕ ನಾರಾಯಣಗೌಡ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡು ಜೆಡಿಎಸ್ ಬೆಂಬಲಿಸುವುದಾಗಿ ಘೋಷಿಸಿದರು.

ತಿಮ್ಮೇಗೌಡರ ಬೆಂಬಲದೊಂದಿಗೆ 11ವಾರ್ಡುಗಳಲ್ಲಿ ಜಯ ಸಾಧಿಸಿದ್ದ ಜೆಡಿಎಸ್ ಪುರಸಭೆಯಲ್ಲಿ ಸರಳ ಬಹುಮತ ಪಡೆದು ಪುರಸಭೆಯ ಆಡಳಿತದ ಚುಕ್ಕಾಣಿಯನ್ನು ಹಿಡಿಯಲಿದೆ. ಕಳೆದ 25 ವರ್ಷಗಳ ಪುರಸಭೆಯ ಕಾಂಗ್ರೆಸ್  ದುರಾಡಳಿತಕ್ಕೆ ಅಂತ್ಯಹಾಡಿದ ಪಟ್ಟಣದ ಜನತೆಗೆ ಶಾಸಕ ಡಾ.ನಾರಾಯಣಗೌಡ ಧನ್ಯವಾದಗಳನ್ನು ಸಮರ್ಪಿಸಿದರು. ಶಾಸಕ ನಾರಾಯಣಗೌಡ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿ ಜೆಡಿಎಸ್ ಪಕ್ಷಕ್ಕೆ ಮುಖಭಂಗ ಮಾಡಿದ್ದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಕೈವಶದಲ್ಲಿದ್ದ ಪುರಸಭೆಯು ಜೆಡಿಎಸ್ ಪಾಲಾಗುತ್ತಿರುವುದರಿಂದ ಕಾಂಗ್ರೆಸ್ ಪಾಳಯದಲ್ಲಿ ಸೂತಕದ ಛಾಯೆ ಆವರಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: