ಪ್ರಮುಖ ಸುದ್ದಿ

ಸಚಿವೆ ನಿರ್ಮಲಾ ಸೀತಾರಾಮನ್ ಗೆ ಶುಭ ಕೋರುವ ಜೊತೆ ವ್ಯಂಗ್ಯ ಭರಿತ ಟ್ವೀಟ್ ಮಾಡಿದ ಮಾಜಿ ಸಂಸದೆ ರಮ್ಯಾ

ರಾಜ್ಯ(ಬೆಂಗಳೂರು)ಜೂ.1:- ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಮೋದಿ ಸಚಿವ ಸಂಪುಟದಲ್ಲಿ ಹಣಕಾಸು ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಶುಭ ಕೋರುವ ಜೊತೆ ವ್ಯಂಗ್ಯ ಭರಿತ ಟ್ವೀಟ್ ಮಾಡಿದ್ದು, ಸುದ್ದಿಯಾಗಿದ್ದಾರೆ.

ಸಚಿವೆ ನಿರ್ಮಲಾ ಸೀತಾರಾಮನ್ ಗೆ ಶುಭ ಕೋರಿ ಟ್ವೀಟ್ ಮಾಡಿರುವ ರಮ್ಯಾ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರನ್ನು ನೆನಪಿಸಿಕೊಂಡಿದ್ದು, 1970ರಲ್ಲಿ ಇಂದಿರಾಗಾಂಧಿಯವರು ಮಾತ್ರ ನಿಭಾಯಿಸಿದ್ದ ಹಣಕಾಸು ಖಾತೆಯನ್ನು ನೀವಿಂದು ನಿಭಾಯಿಸಲು ಮುಂದಾಗಿದ್ದೀರಿ. ಇದರಿಂದ ಮಹಿಳೆಯರಿಗೆ ಹೆಮ್ಮೆಯಾಗುತ್ತಿದೆ. ಜಿಡಿಪಿ ಸುಧಾರಿಸಿಲ್ಲ. ನೀವು ಆರ್ಥಿಕ ಅರ್ಥ ವ್ಯವಸ್ಥೆಗೆ ಚೇತರಿಕೆ ತರುತ್ತೀರೆಂದು ನಂಬಿದ್ದೇನೆ. ನಿಮಗೆ ನಮ್ಮ ಬೆಂಬಲವಿದೆ’ ಎಂದು ಟ್ವೀಟ್ ಮಾಡಿದ್ದು, ರಮ್ಯಾ ಟ್ವೀಟ್ ಗೆ ಸಾಕಷ್ಟು ವ್ಯಂಗ್ಯ ಮಿಶ್ರಿತ ಪ್ರತಿಕ್ರಿಯೆಗಳು ಬಂದಿದ್ದು, ಮತ ಚಲಾಯಿಸದ ರಮ್ಯಾ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: