ಮೈಸೂರು

ಕೈಕೊಟ್ಟ ವೆಂಟಿಲೇಟರ್: ರೋಗಿ ಸಾವು ; ವೈದ್ಯರ ನಿರ್ಲಕ್ಷ್ಯ ಕಾರಣ: ಆರೋಪ

ವೆಂಟಿಲೇಟರ್ ನ್ನು ಸರಿಯಾಗಿ ನಿರ್ವಹಿಸದೇ ರೋಗಿಯೋರ್ವರು ಮೃತಪಟ್ಟ ಘಟನೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಮೃತರ ಮಗ ಆರೋಪಿಸಿದ್ದಾರೆ.

ಮೃತರನ್ನು ಮೇಟಗಳ್ಳಿ ಬಿ.ಎಂ.ಶ್ರೀನಗರ ನಿವಾಸಿ ಚಿಕ್ಕಮಾದು (68) ಎಂದು ಗುರುತಿಸಲಾಗಿದೆ. ಇವರು ವಾರದ ಹಿಂದೆ ಬನ್ನಿಮಂಟಪದ ಬಳಿ ಅಪಘಾತಕ್ಕೀಡಾಗಿ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಅಲ್ಲಿ ವೆಂಟಿ ಲೇಟರ್ ಇಲ್ಲದಿರುವುದರಿಂದ ಅವರನ್ನು ಮಿಶಿನ್ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿತ್ತು. ಮಿಶಿನ್ ಆಸ್ಪತ್ರೆಯಲ್ಲಿ ವೆಚ್ಚದ ಬಾಬ್ತು ಒಂದು ಲಕ್ಷದವರಗೆ ಬಂದುದರಿಂದ ಅವರನ್ನು ಅವರ ಮಗ ಸ್ಥಳೀಯ ಶಾಸಕರ ನೆರವಿನಿಂದ ಕೆ.ಆರ್.ಆಸ್ಪತ್ರೆಗೆ ವೆಂಟಿಲೇಟರ್ ಹಾಕಿಸಿ ತಂದೆಯನ್ನು ಮತ್ತೆ ಕೆ.ಆರ್.ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗಾಗಿ ದಾಖಲಿಸಿದ್ದರು.

ಆದರೆ ಮಂಗಳವಾರ ರಾತ್ರಿ ವೆಂಟಿಲೇಟರ್ ಕೆಟ್ಟ ಪರಿಣಾಮ ಚಿಕ್ಕಮಾದು ಸಾವನ್ನಪ್ಪಿದ್ದಾರೆ. ಆದರೆ ಅವರ ಮಗ ವೈದ್ಯರ ನಿರ್ಲಕ್ಷ್ಯದಿಂದ ತನ್ನ ತಂದೆ ಸಾವನ್ನಪ್ಪಿದ್ದಾರೆ. ಅವರಿಗೆ ವೆಂಟಿಲೇಟರ್ ನ್ನು ಸರಿಯಾಗಿ ನಿರ್ವಹಣೆ ಮಾಡಲು ಬರುತ್ತಿಲ್ಲ. ಒಬ್ಬರಿಂದ ಒಬ್ಬರಿಗೆ ವರ್ಗಾಯಿಸುತ್ತಲೇ ಇರುತ್ತಾರೆ ಎಂದು ಆರೋಪಿಸಿ ದೂರು ನೀಡಲು ಮುಂದಾಗಿದ್ದಾರೆ.

ಚಿಕ್ಕಮಾದು ಅವರ ಮೃತ ಶರೀರವನ್ನು ಕೆ.ಆರ್.ಆಸ್ಪತ್ರೆಯ ಶಾವಾಗಾರದಲ್ಲಿರಿಸಲಾಗಿದೆ.

 

Leave a Reply

comments

Related Articles

error: