ಮೈಸೂರು

ಶಿವಯೋಗಿ ಸ್ವಾಮಿ ವಿದ್ಯಾ ಸಂಸ್ಥೆ ನೂತನ ಕಟ್ಟಡ ಉದ್ಘಾಟನೆ

ಗಾಂಧಿನಗರದಲ್ಲಿರುವ ಶ್ರೀಶಿವಯೋಗಿಸ್ವಾಮಿ ವಿದ್ಯಾಸಂಸ್ಥೆಯ ನೂತನ ಶಾಲಾ-ಕಾಲೇಜು ಕಟ್ಟಡ ಉದ್ಘಾಟನಾ ಸಮಾರಂಭವನ್ನು ಇದೇ ಫೆ.11ರ ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಮುಡಾ ಮಾಜಿ ಸದಸ್ಯ ಹಾಗೂ ಸಂಸ್ಥೆ ಗೌರವ ಕಾರ್ಯದರ್ಶಿ ಸಿ.ಟಿ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಮಾತನಾಡಿ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್  ಕಟ್ಟಡವನ್ನು ಉದ್ಘಾಟಿಸುವರು, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸಂಪಾದಕ ರಾಜಶೇಖರ್ ಕೋಟಿ  ವಿದ್ಯಾಸಂಸ್ಥೆಯ ಡಾ.ಸಿ.ಜಿ.ಪ್ರಭುಶಂಕರ್ ಹಾಗೂ ಇತರರು ಉಪಸ್ಥಿತರಿರುವರು ಎಂದು ತಿಳಿಸಿದರು.

ಆರ್ಥಿಕವಾಗಿ ಹಿಂದುಳಿದ ಕೂಲಿಕಾರ್ಮಿಕ ಮಕ್ಕಳೇ ಹೆಚ್ಚಿರುವ ಶಾಲೆಯಲ್ಲಿ ಅನುಭವಿ ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿದ್ದು ಫಲಿತಾಂಶದ ಪ್ರಮಾಣವೂ ಉತ್ತಮವಾಗಿದ್ದು ಪ್ರಸಕ್ತ ಸಾಲಿನಿಂದ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದೊಂದಿಗೆ ವಾಣಿಜ್ಯ ತರಗತಿಗಳನ್ನು ಆರಂಭಿಸಲಾಗುವುದು  ಎಂದು ಪ್ರಾಚಾರ್ಯೆ ರಾಧಮ್ಮ ತಿಳಿಸಿದರು.

ಮುಖ್ಯ ಶಿಕ್ಷಕ ಡಿ.ಲೋಕೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: