
ಪ್ರಮುಖ ಸುದ್ದಿಮೈಸೂರು
‘ಪಪ್ಪಾಯ’ ಸೋಂಕು ರೋಗಕ್ಕೆ ರಾಮಬಾಣವಾಗಲಿದೆ ‘ಪವರ್ ಪ್ಲಸ್’
ನೂತನ ಅವಿಷ್ಕಾರಕ್ಕೆ ಉತ್ತಮ ಸ್ಪಂದನೆ : ಡಾ.ವಸಂತಕುಮಾರ್ ತಿಮಕಾಪುರ
ಮೈಸೂರು,ಜೂ.1 : ಪಪ್ಪಾಯಿಗೆ ತಗಲುವ ವೈರಸ್ ರೋಗದ ನಿಯಂತ್ರಣ ಹಾಗೂ ಪರಿಹಾರೋಪಾಯಕ್ಕೆ ‘ಪವರ್ ಪ್ಲಸ್’ ಎಂಬು ಔಷಧಿಯನ್ನು ಸಂಶೋಧಿಸಲಾಗಿದು ಈ ಸೋಂಕು ರೋಗಕ್ಕೆ ರಾಮಬಾಣವಾಗಿದೆ ಎಂದು ಕೃಷಿ ವಿಜ್ಞಾನಿ ಡಾ.ವಸಂತ ಕುಮಾರ್ ತಿಮಕಾಪುರವರು ತಿಳಿಸಿದರು.
ಕಳೆದ ಹತ್ತು ವರ್ಷದಿಂದ ಈ ಬಗ್ಗೆ ಸಂಶೋಧನೆ ನಡೆಸಿದ ತಾವು ಈ ಔಷಧಿಯನ್ನು ಕಂಡು ಹಿಡಿದಿದ್ದು, ಇದರಿಂದ ಪಪ್ಪಾಯಿಗೆ ತಗಲುವ ಏಫಿಡ್ಸ್ ಹೇನುಗಳ ಸಂಪೂರ್ಣ ಹತೋಟಿ ಹಾಗೂ ಸಂಪದ್ಭರಿತವಾಗಿ ಗಿಡ ಬೆಳೆಯಲು ಅನುಕೂಲವಾಗುವಂತಹ ಈ ಔಷಧಿ ಅತ್ಯಂತ ಪರಿಣಾಮಕಾರಿಯಾಗಿದ್ದು, ಈ ರೋಗವನ್ನು ಬುಡ ಸಮೇತ ತೆಗೆದುಹಾಕುವುದಲ್ಲದೇ, ಆ ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ಗಿಡಗಳಿಗೆ ನೀಡುವುದು ಎಂದು ವಿವರಿಸಿದರು.
ಪಪ್ಪಾಯಿ ಬೆಳೆಗೆ ಕಾಡುವ ಈ ರೋಗ ರೈತನಿಗೆ ತೀವ್ರ ನಷ್ಟವುಂಟು ಮಾಡುತ್ತಿತ್ತು, ಅದರ ಪರಿಹಾರೋಪಾಯವಾಗಿ ಔಷಧಿಯನ್ನು ಸಂಶೋಧಿಸಿದ್ದು, ಗ್ರೀನ್ ಲೈಫ್ ಸೈನ್ಸ್ ಟೆಕ್ನಾಲಜಿ ಕಂಪನಿ ವತಿಯಿಂದ ಲಭ್ಯವಿರುವ ಔಷಧಿಯನ್ನು ಕಳೆದ ಮೂರು ವರ್ಷಗಳಿಂದ ರೈತರು ಬಳಸುತ್ತಿದ್ದು, ಉತ್ತಮ ಇಳುವರಿಯೊಂದಿಗೆ ರೋಗದ ತಡೆಗಟ್ಟುವ ನಿಟ್ಟಿನಲ್ಲಿ ಒಳ್ಳೆಯ ಫಲಿತಾಂಶ ಬಂದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹರ್ಷ ವ್ಯಕ್ತಪಡಿಸಿ. ಔಷಧಿಯ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು
ಇದೊಂದು ಅದ್ಭುತ ಸಂಶೋಧನೆಯಾಗಿದ್ದು ಕೆಳ ಹಂತದ ರೈತರ ಬೆಂಬಲಕ್ಕೆ ಹಾಗೂ ಪ್ರೇರಣದಾಯಕವಾಗುವಂತಹ ಸಂಶೋಧನೆಗಳು ಅಗತ್ಯವಿದ್ದು, ಈ ನಿಟ್ಟಿನಲ್ಲಿ ವಸಂತ ತಿಮಕಾಪುರವರ ಸಾಧನೆ ಅದ್ವಿತೀಯವೆಂದು ಪ್ರೊ.ಹೆಚ್.ಶೇಖರ ಶೆಟ್ಟಿ ಪ್ರಶಂಸಿದರು.
ಹೆಚ್.ಡಿ.ಕೋಟೆಯ ಬೆಟ್ಟದಪುರದ ಪಪ್ಪಾಯಿ ಬೆಳಗಾರ ಪಾಪೇಗೌಡ ಈ ಔಷಧ ಹಾಗೂ ರೋಗ ನಿಯಂತ್ರಣದ ಬಗ್ಗೆ ಅನಿಸಿಕೆ ಹಂಚಿಕೊಂಡರು.
ಆರ್ಕಿಡ್ ಕೃಷಿಕರಾದ ರಜನಿ ಜೈಪಾಲ್, ಪ್ರೊ.ನಾಗೇಂದ್ರನ್ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)