ದೇಶಪ್ರಮುಖ ಸುದ್ದಿ

ಇಂದಿನಿಂದ ಹೊಸ ಆರ್ಥಿಕ ವರ್ಷ: ನೀವು ತಿಳಿಯಬೇಕಿದೆ ಈ 10 ನಿಯಮಗಳು!

ನವದೆಹಲಿ (ಜೂ.1): ಆರ್ಥಿಕ ವರ್ಷ 2018-19 ಕೊನೆಗೊಂಡಿದೆ. ಇಂದಿನಿಂದ ನೂತನ ಆರ್ಥಿಕ ವರ್ಷ 2019-20 ಪ್ರಾರಂಭವಾಗಲಿದೆ. 2019-20 ರ ಆರ್ಥಿಕ ವರ್ಷದಲ್ಲಿ ಹಲವು ನಿಯಮಗಳು ಬದಲಾಗಿವೆ. ಈ ನಿಯಮಗಳು ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ.

ಎಪ್ರಿಲ್ 1ರಿಂದ ಬದಲಾಗಲಿರುವ 10 ಪ್ರಮುಖ ನಿಯಮಗಳು:
ಏಪ್ರಿಲ್ 1 ರಿಂದ, ಆಧಾರ್ ಕಾರ್ಡಿನೊಂದಿಗೆ ಜೋಡಣೆಯಾಗದ ಪ್ಯಾನ್ ಕಾರ್ಡನ್ನು ಪರಿಗಣಿಸಲಾಗುವುದಿಲ್ಲ. ಇದು ನಿಮಗೆ ಆದಾಯ ತೆರಿಗೆ ಸಲ್ಲಿಸಲು ಕಷ್ಟವಾಗುತ್ತದೆ.

ಏಪ್ರಿಲ್ 1 ರಿಂದ ಟ್ರಾಯ್ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಒಂದು ವೇಳೆ ಇನ್ನೂ ಕೂಡ ನೀವೂ ನಿಮ್ಮ ಆಯ್ಕೆಯ ಚಾನಲ್ ಗಳನ್ನು ಸೆಟ್ ಮಾಡಿಲ್ಲವಾದರೆ ಟಿವಿ ಸೆಟ್ ಅಪ್ ಬಾಕ್ಸ್ ಕಾರ್ಯ ನಿರ್ವಹಿಸುವುದಿಲ್ಲ. ಇಂದಿನಿಂದ ಟಿವಿ ವೀಕ್ಷಿಸಲು ನಿಮ್ಮ ನೆಚ್ಚಿನ ಪ್ಯಾಕ್ ಆಯ್ಕೆಮಾಡುವುದು ಮುಖ್ಯ. ಟಿವಿ ವೀಕ್ಷಿಸಲು, ಕನಿಷ್ಠ 153 ಖರ್ಚು (ಜಿಎಸ್ಟಿ ಜೊತೆ) ಮಾಡಬೇಕಾಗುತ್ತದೆ. ಇದರಲ್ಲಿ 100 ಉಚಿತ ಪ್ರಸಾರ ವಾಹಿನಿಗಳನ್ನು ನೋಡಲು ಸಾಧ್ಯವಾಗುತ್ತದೆ. ಇವುಗಳಲ್ಲಿ 25 ದೂರದರ್ಶನದ ಚಾನೆಲ್ ಗಳು, ಉಳಿದ 75 ನೀವು ಆಯ್ಕೆ ಮಾಡಲಾದ ಚಾನಲ್ ಗಳು.

2017-18ರ ಹಣಕಾಸು ವರ್ಷಕ್ಕೆ ಆದಾಯವನ್ನು ಸಲ್ಲಿಸುವ ಮಾರ್ಚ್ 31, ಕೊನೆಯ ದಿನಾಂಕ. ಏಪ್ರಿಲ್ 1 ರಿಂದ ಐಟಿ ರಿಟರ್ನ್ಸ್ ಸಲ್ಲಿಸಲು ಅಥವಾ ಯಾವುದೇ ಬದಲಾವಣೆಗಳನ್ನು ಮಾಡಬಹುದು. ಬಿಸಿನೆಸ್ ಮಾಡುವ ಜನರಿಗೆ ಜಿಎಸ್‍ಟಿ ರಿಟರ್ನ್ ಸಲ್ಲಿಸುವ ಕೊನೆಯ ದಿನಾಂಕ ಮಾರ್ಚ್ 31. ಏಪ್ರಿಲ್ 1 ರಿಂದ ಕಾರು ಕೊಳ್ಳುವುದು ದುಬಾರಿಯಾಗಿರುತ್ತದೆ. ವಿಭಿನ್ನ ಕಂಪೆನಿಗಳ ಕಾರ್ ಗಳು 75 ಸಾವಿರ ರೂಪಾಯಿಗಳವರೆಗೂ ಹೆಚ್ಚಾಗಲಿವೆ. ಅನೇಕ ಕಂಪನಿಗಳು ಈಗಾಗಲೇ ಇದನ್ನು ಘೋಷಿಸಿವೆ.

ಆದಾಗ್ಯೂ, ಏಪ್ರಿಲ್ 1 ರ ನಂತರ, ಮನೆ ಖರೀದಿಸುವುದು ಅಗ್ಗವಾಗಲಿದೆ. ನಿರ್ಮಾಣದ ಹಂತದಲ್ಲಿ ಜಿಎಸ್ಟಿ ದರವು 12 ರಿಂದ ಶೇ 5 ಕ್ಕೆ ಇಳಿದಿದೆ.
ಏಪ್ರಿಲ್ 1 ರಿಂದ ಇಎಂಐ ಅಗ್ಗವಾಗಲಿದೆ. ಎಂಸಿಎಲ್‍ಆರ್ ಆಧಾರದ ಮೇಲೆ ಮೊದಲ ಸಾಲದ ದರವನ್ನು ನಿಗದಿಪಡಿಸಲಾಗಿದೆ. ಏಪ್ರಿಲ್ 1 ರಿಂದ ಆರ್ಬಿಐ ರೆಪೋ ದರ ಆಧಾರದ ಮೇಲೆ ಇದನ್ನು ನಿಗದಿಗೊಳಿಸಲಾಗುವುದು.

ಏಪ್ರಿಲ್ 1 ರಿಂದ, ಹೊಸ ತೆರಿಗೆ ಕಾನೂನು ಅನ್ವಯಿಸುತ್ತದೆ. 2019-20ರ ಆರ್ಥಿಕ ವರ್ಷದಲ್ಲಿ 5 ಲಕ್ಷ ರೂ.ವರೆಗೆ ತೆರಿಗೆ ರಿಯಾಯಿತಿ ನೀಡಲಾಗಿದೆ.
ಹೊಸ ಹಣಕಾಸಿನ ವರ್ಷದಲ್ಲಿ 50 ಸಾವಿರ ಸ್ಟ್ಯಾಂಡರ್ಡ್ ತೆರಿಗೆ ವಿನಾಯಿತಿ, ಬ್ಯಾಂಕ್ ಠೇವಣಿಗಳಲ್ಲಿ 50,000 ರೂ. ತೆರಿಗೆಯಿಂದ ಮುಕ್ತವಾಗಲಿದೆ. ಮೊದಲು ಅದು 10 ಸಾವಿರ ರೂ. ಇತ್ತು. ಹೊಸ ಹಣಕಾಸಿನ ವರ್ಷದಲ್ಲಿ, ಎರಡನೆಯ ಮನೆ ಕೊಳ್ಳಲು ಕೂಡಾ (ಆ ಮನೆಯನ್ನು ಬಾಡಿಗೆಗೆ ನೀಡದಿದ್ದಲ್ಲಿ) ತೆರಿಗೆಯನ್ನು ಪಾವತಿಸಬೇಕಾಗಿಲ್ಲ. (ಎನ್.ಬಿ)

Leave a Reply

comments

Related Articles

error: