ಮೈಸೂರು

ನಾಳೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಾಭ್ಯಾಸ : ರಸ್ತೆ ಸಂಚಾರ ಮಾರ್ಗ ನಿರ್ಬಂಧ

ಮೈಸೂರು,ಜೂ.1:- ಯೋಗ ಫೆಡರೇಷನ್ ಆಫ್ ಮೈಸೂರು ಟ್ರಸ್ಟ್ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಾಭ್ಯಾಸವನ್ನು  02.06.2019 ರಂದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಮೈಸೂರು ನಗರದ ಚಾಮರಾಜ ಒಡೆಯರ್ ವೃತ್ತದಿಂದ ಜಯಚಾಮರಾಜೇಂದ್ರ ಒಡೆಯರ್ ವೃತ್ತದವರೆಗಿನ ರಸ್ತೆಯಲ್ಲಿ ನಡೆಸಲಾಗುತ್ತಿದೆ.

ಈ ಸಂಬಂಧ   02.06.2019 ರಂದು ಬೆಳಿಗ್ಗೆ 5 ಗಂಟೆಯಿಂದ 9.30 ರವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದು,    ಬದಲಿ ಮಾರ್ಗದಲ್ಲಿ ಸಾರ್ವಜನಿಕರು ತಮ್ಮ ವಾಹನಗಳಲ್ಲಿ ಸಂಚರಿಸುವಂತೆ ಕೋರಲಾಗಿದೆ.

ಬದಲಿ ಮಾರ್ಗ

ಕೆ.ಆರ್ ವೃತ್ತದಿಂದ ಎ.ವಿ ರಸ್ತೆ ಮೂಲಕ ಚಾಮರಾಜ ಒಡೆಯರ್ ವೃತ್ತದ ಕಡೆಗೆ(ಓಲ್ಡ್ ಸ್ಟ್ಯಾಚ್ಯೂ ಕಡೆಗೆ) ಸಾಗುವ ಎಲ್ಲಾ ವಾಹನಗಳು ಕೆ.ಆರ್ ವೃತ್ತದಲ್ಲಿ ಎಸ್.ಆರ್ ರಸ್ತೆ ಮೂಲಕ ಸಾಗಬೇಕು.

ಅಶೋಕ ರಸ್ತೆಯಿಂದ ಓಲ್ಡ್ ಸ್ಟ್ಯಾಚ್ಯೂ ಕಡೆಗೆ ಸಾಗುವ ಎಲ್ಲಾ ಮಾದರಿಯ ವಾಹನಗಳು ಮಹಾವೀರ ವೃತ್ತದಿಂದ ಗಾಂಧಿ ವೃತ್ತದ ಮೂಲಕ ಎಸ್.ಆರ್ ರಸ್ತೆ ತಲುಪಿ ಮುಂದೆ ಸಾಗಬೇಕು.

ಜಯಚಾಮರಾಜೇಂದ್ರ ವೃತ್ತ(ಹಾರ್ಡಿಂಜ್ ವೃತ್ತ) ದಿಂದ ಎ.ವಿ ರಸ್ತೆಗೆ ಬರುತ್ತಿದ್ದ ವಾಹನಗಳು ಬಿ.ಎಂ ರಸ್ತೆ ಮೂಲಕ ಮುಂದೆ ಸಾಗಬೇಕು. (ಎಸ್.ಎಚ್)

Leave a Reply

comments

Related Articles

error: