ಮೈಸೂರು

ಆರೋಗ್ಯಕ್ಕೆ ಯೋಗ ಔಷಧ ರೂಪ : ಪ್ರೊ.ಜನಾರ್ದನ್

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು  ಯೋಗ ಅಗತ್ಯವಾದ ಔಷಧ ರೂಪವಾಗಿದೆ ಎಂದು ಜೀವಶಾಸ್ತ್ರ ಅಧ್ಯಯನದ ಪ್ರಾಧ್ಯಾಪಕ ಜನಾರ್ದನ್ ತಿಳಿಸಿದರು.

ಮೈಸೂರಿನ  ಬಿಎಸ್‍ಎನ್‍ಎಲ್‍ನ ಸಭಾಂಗಣದಲ್ಲಿ ನಡೆದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಆಯೋಜಿಸಿದ  ಅಂತರರಾಷ್ಟ್ರಿಯ ಯೋಗ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ಮಾನಸಿಕ, ದೈಹಿಕ ಒತ್ತಡಗಳ ನಿವಾರಣೆಗೆ ಯೋಗವೊಂದೇ ದಾರಿ ಎಂದರಲ್ಲದೇ ವಿಶೇಷವಾಗಿ ಮಕ್ಕಳಲ್ಲಿ ನಿಜವಾದ ಯೋಗದ ಅರಿವನ್ನು ಮೂಡಿಸುವುದು ಅವಶ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಟ್ರಸ್ಟ್‍ನ ಗೋಪಾಲಕೃಷ್ಣ, ಬಿಎಸ್‍ಎನ್‍ಎಲ್ ತರಬೇತಿಯ ಪ್ರಾಂಶುಪಾಲ ಶ್ರೀಕಂಠನ್ ಹಾಗೂ ರಾಮಸ್ವಾಮಿ ಮತ್ತು ವಿದೇಶಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

comments

Related Articles

error: