ದೇಶಪ್ರಮುಖ ಸುದ್ದಿ

ಅಮಿತ್ ಶಾ, ರಾಜನಾಥ್ ಸಿಂಗ್ ರಿಂದ ಅಧಿಕಾರ ಸ್ವೀಕಾರ

ನವದೆಹಲಿ,ಜೂ.1- ಗೃಹ ಸಚಿವರಾಗಿ ಅಮಿತ್ ಶಾ ಇಂದು (ಶನಿವಾರ) ಅಧಿಕಾರ ವಹಿಸಿಕೊಂಡರು. ಇಂದು ಸಂಸತ್ ನ ಉತ್ತರ ಬ್ಲಾಕ್ ನಲ್ಲಿರುವ ಕೊಠಡಿಗೆ ತೆರಳಿ ಅಧಿಕಾರ ವಹಿಸಿಕೊಂಡರು.

ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಮೋದಿ ನೇತೃತ್ವದಲ್ಲಿ ದೇಶದ ಸುರಕ್ಷತೆ ಮತ್ತು ದೇಶದ ನಾಗರಿಕರ ಕಲ್ಯಾಣಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದಿದ್ದಾರೆ.

ಶಾ ಅವರನ್ನು ಕೇಂದ್ರ ಗೃಹ ಖಾತೆಯ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಇತರ ಅಧಿಕಾರಿಗಳು ಸ್ವಾಗತಿಸಿ ಬರಮಾಡಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಕೇಂದ್ರ ಸರ್ಕಾರದಲ್ಲಿ ಅಮಿತ್ ಶಾ ಮೊದಲ ಬಾರಿಗೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎರಡು ದಿನಗಳ ಬಳಿಕ ಗೃಹ ಸಚಿವ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ರಾಜ್ ನಾಥ್ ಸಿಂಗ್ ಅವರ ಕೈಯಲ್ಲಿದ್ದ ಗೃಹ ಸಚಿವಾಲಯದ ಅಧಿಕಾರ ಇದೀಗ ಶಾ ಅವರಿಗೆ ಹಸ್ತಾಂತರವಾಗಿದೆ.

ರಾಜ್ ನಾಥ್ ಸಿಂಗ್ ಅಧಿಕಾರ ಸ್ವೀಕಾರ: ರಕ್ಷಣಾ ಸಚಿವರಾಗಿ ರಾಜ್ ನಾಥ್ ಸಿಂಗ್ ಸಹ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ನಂತರ ಭೂಸೇನಾ, ವಾಯುಪಡೆ, ನೌಕಾದಳದ ಮುಖ್ಯಸ್ಥರೊಂದಿಗೆ ರಾಜ್ ನಾಥ್ ಸಿಂಗ್ ಸಭೆ ನಡೆಸಿದ್ದಾರೆ.

ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ, ನೌಕಾಪಡೆ ಮುಖ್ಯಸ್ಥ ಎಡ್ಮಿರಲ್ ಕರಮ್ ಬೀರ್ ಸಿಂಗ್ ಅವರೊಂದಿಗೆ ಸಭೆ ನಡೆಸಿದರು. (ಎಂ.ಎನ್)

Leave a Reply

comments

Related Articles

error: