ಮೈಸೂರು

ಕಳಪೆ ಗುಣಮಟ್ಟದ ಶೂ-ಸಾಕ್ಸ್ ವಿತರಣೆ

ಮೈಸೂರು,ಜೂ.1 : ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸುವ  ಶೂ-ಸಾಕ್ಸ್ ನಲ್ಲಿಯೂ ಅವ್ಯವಹಾರ ನಡೆಯುತ್ತಿದ್ದು ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು  ಭಾವಸಾರ್ ಎಂಟರ್ ಪ್ರೈಸಸ್ ಒತ್ತಾಯಿಸಿದೆ.

ಒಂದರಿಂದ 5ನೇ ತರಗತಿವರೆಗೆ ತಲಾ 265.ರೂ. 6 ರಿಂದ 8ರವರೆಗೆ 295 ರೂ, 9 ರಿಂದ 10ಕ್ಕೆ 325 ರೂ.ಗಳನ್ನು ನಿಗದಿಪಡಿಸಿದೆ, ಆದರೆ ಶಾಲೆಯವರು ಕಳಪೆ ಗುಣಮಟ್ಟದ ಶೂಗಳನ್ನು ಖರೀದಿಸಿ ವಿತರಿಸುತ್ತಿದೆ ಎಂದು ದೂರಿದೆ.

ಸರ್ಕಾರ ನೀಡುವ ಬೆಲೆಗೆ ಪ್ಯಾರಗಾನ್ ಶೂ ಅನ್ನೇ ಖರೀದಿಸಬಹುದಾಗಿದೆ, ಒಂದೊಮ್ಮೆ  ಅವಕಾಶ ನೀಡಿದರೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಬಾಟ ಮತ್ತು ಪ್ಯಾರಗಾನ್ ಶೂಗಳನ್ನು ಅದೇ ಹಣಕ್ಕೆ ಸರಬರಾಜು ಮಾಡಲು ಸಿದ್ದವಿರುವುದಾಗಿ ‍ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: