ಮೈಸೂರು

ರೋಟರಿ ಮೈಸೂರು ಮಿಡ್ವೌನ್‍ನಿಂದ ‘ಈಜಿ ಬಿಜ್’ ಕಾರ್ಯಾಗಾರ

ಕಾರ್ಮಿಕ ಹಾಗೂ ಶಿಕ್ಷಣ ನೀತಿ ಕಾನೂನುಗಳನ್ನು ಸುಲಲಿತವಾಗಿ ಆರ್ಥೈಸುವ ‘ಈಜಿ ಬಿಜ್‍-2017’ ಕಾರ್ಯಕ್ರಮವನ್ನು ರೋಟರಿ ಮೈಸೂರ್‍ ಮಿಡ್ಟೌನ್‍ನಿಂದ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಕೆ.ಬಿ.ಹರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಮಾತನಾಡಿ ಫೆ.14ರ ಬೆಳಿಗ್ಗೆ 9ಕ್ಕೆ ಹೋಟೆಲ್ ಗ್ರಾಂಡ್‍ ಮರ್ಕ್ಯೂರ್‍ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಇಎಸ್ಐ, ಇಪಿಎಫ್ ಮತ್ತು ಕಾರ್ಮಿಕ ಕಾನೂನುಗಳ ನೂತನ ಬದಲಾವಣೆಗಳ ಬಗ್ಗೆ ಇಎಸ್ಐ – ಇಪಿಎಫ್ ಆಯುಕ್ತರಾದ ಸತ್ಯನಾರಾಯಣ ಮಣಿಕರ ಹಾಗೂ ಡಾ.ಬಿ.ಶಿವಕುಮಾರ್  ಮತ್ತು ಕಾರ್ಮಿಕ ಕಾನೂನು ಆಯುಕ್ತೆ ಮೀನಾ ಪಾಟೀಲ್ ಇವರುಗಳು ವಿಚಾರ ಸಂಕಿಣದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡುವರು. ಕಾರ್ಯಾಗಾರದಲ್ಲಿ ಪಾಲ್ಗೊಂಡವರಿಗೆ ಕಾನೂನಿನ ಕೈಪಿಡಿ ಹಾಗೂ ಸಿಡಿಯನ್ನು ನೀಡಲಾಗುವುದು. ಆದ್ದರಿಂದ ವಾಣಿಜ್ಯೋದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಕೈಗಾರಿಕೋದ್ಯಮಿಗಳು ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9448464479 ಅನ್ನು ಸಂಪರ್ಕಿಸಬಹುದು

ರೋಟರಿ ಸಂಸ್ಥೆಯ ಗವರ್ನರ್  ಭಾಸ್ಕರ್ ಸೈನಿಕ್, ನರಸಿಂಹ ಹಾಗೂ ವೀರೇಶ್ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: