ಸುದ್ದಿ ಸಂಕ್ಷಿಪ್ತ

ಸಂಗೀತ ಡಿಪ್ಲೊಮೊ -ಪದವಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ಮೈಸೂರು,ಜೂ.1 : ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ 2019-20ನೇ ಶೈಕ್ಷಣಿಕ ಸಾಲಿನ ಡಿಪ್ಲೋಮೊ ಮತ್ತು ಬಿ.ಎ. ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಅಥವಾ ಹಿಂದೂಸ್ತಾನಿ ಸಂಗೀತ ಗಾಯನ, ತಬಲ, ವೀಣೆ, ಮೃದಂಗ, ಭರತನಾಟ್ಯ, ನಾಟಕ ವಿಭಾಗಗಳಿಗೆ ಪ್ರವೇಶಾತಿ ಆರಂಭವಾಗಿದ್ದು, ವಿದ್ಯಾರ್ಥಿಯು ಕಡ್ಡಾಯವಾಗಿ ಎಸ್.ಎಸ್.ಎಲ್.ಸಿ ಯನ್ನು ಅಭ್ಯಾಸ ಮಾಡಿರಬೇಕು, ಅರ್ಜಿಯನ್ನು ಜೂ.10ರವರೆಗೆ ಪಡೆಯಬಹುದಿದ್ದು, ದಂಡ ಶುಲ್ಕದೊಂದಿಗೆ ಜೂ.15ರವರೆಗೆ ವಿಸ್ತರಿಸಲಾಗಿದೆ. ವಿವರಗಳಿಗೆ ವೆಬ್ ಸೈಟ್ www.musicuniversity.ac.in, E-mail : [email protected], ದೂ.ಸಂ. 0821 2419443, 2402141 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: