ಮೈಸೂರು

ವಿಶ್ವ ಯೋಗ ದಿನದ ಹಿನ್ನೆಲೆ : ಯಶಸ್ವಿಯಾಗಿ ನಡೆದ ಯೋಗ ರಿಹರ್ಸಲ್

ಮೈಸೂರು,ಜೂ.2:- ವಿಶ್ವ ಯೋಗ ದಿನದ ಹಿನ್ನೆಲೆಯಲ್ಲಿ  ವಿಶ್ವ ಯೋಗ ದಿನಕ್ಕೆ  ಯೋಗ ನಗರಿ ಮೈಸೂರು ಸಜ್ಜಾಗಿದ್ಉ, ಇಂದು ನಡೆದ ನಾಲ್ಕನೇ ಹಂತದ ಯೋಗ ರಿಹರ್ಸಲ್ ಯಶಸ್ವಿಯಾಗಿ ನಡೆಯಿತು.

ಇಂದು ಮುಂಜಾನೆ ನಾಲ್ಕನೇ  ಹಂತದ ಯೋಗ ರಿಹರ್ಸಲ್ ನಡೆದಿದ್ದು, ನಗರದ ಚಾಮರಾಜ   ವೃತ್ತದಿಂದ ಹಾರ್ಡಿಂಗ್ ವೃತ್ತದ ರಾಜಪಥದಲ್ಲಿ  ಯೋಗಾಭ್ಯಾಸ ನಡೆಸಲಾಯಿತು. ಯೋಗಾಭ್ಯಾಸಕ್ಕೆ ದೀಪ ಬೆಳಗಿಸುವ ಮೂಲಕ ಶಾಸಕರಾದ ಎಸ್.ಎ ರಾಮದಾಸ್ ಹಾಗೂ ಎಲ್ ನಾಗೇಂದ್ರ  ಚಾಲನೆ ನೀಡಿದರು.

ಈಗಾಗಲೇ ಕಳೆದ ಎರಡು ವರ್ಷಗಳಿಂದಲೂ ಗಿನ್ನಿಸ್ ದಾಖಲೆ ಮಾಡಿರುವ ಮೈಸೂರು ಈ ಬಾರಿಯೂ ಮತ್ತೊಂದು ದಾಖಲೆ ಮಾಡಲು ಸಿದ್ಧವಾಗಿದ್ದು,   ಯೋಗಪಟುಗಳು ಕೂಡ ಯೋಗ ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಇಂದು ಮುಂಜಾನೆ ನಡೆದ ಯೋಗಾಭ್ಯಾಸದಲ್ಲಿ  ಸಾವಿರಾರು ಮಂದಿ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: